ಹೈ ರಿಸ್ಕ್ ರಾಷ್ಟ್ರಗಳಿಂದ ಬಂದ 16 ಸಾವಿರ ಪ್ರಯಾಣಿಕರ ಪೈಕಿ 18 ಜನಕ್ಕೆ ಕೋವಿಡ್ ಪಾಸಿಟಿವ್: ಮನ್ಸೂಖ್ ಮಾಂಡವೀಯಾ
ಕೋವಿಡ್-19 ರೂಪಾಂತರಿ ಹೊಸ ತಳಿ ಓಮಿಕ್ರಾನ್ ಪತ್ತೆಯಾದ ಹೈ ರಿಸ್ಕ್ ರಾಷ್ಟ್ರಗಳಿಂದ ಇಲ್ಲಿಯವರೆಗೂ ದೇಶಕ್ಕೆ ಆಗಮಿಸಿದ್ದ 16 ಸಾವಿರ ಪ್ರಯಾಣಿಕರ ಆರ್ ಟಿಪಿಸಿಆರ್ ಟೆಸ್ಟ್ ಮಾಡಲಾಗಿದೆ. ಈ ಪೈಕಿ 18 ಪ್ರಯಾಣಿಕರಲ್ಲಿ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಾಂಡವೀಯಾ ಶುಕ್ರವಾರ ಸಂಸತ್ತಿಗೆ ತಿಳಿಸಿದ್ದಾರೆ.

ನವದೆಹಲಿ: ಕೋವಿಡ್-19 ರೂಪಾಂತರಿ ಹೊಸ ತಳಿ ಓಮಿಕ್ರಾನ್ ಪತ್ತೆಯಾದ ಹೈ ರಿಸ್ಕ್ ರಾಷ್ಟ್ರಗಳಿಂದ ಇಲ್ಲಿಯವರೆಗೂ ದೇಶಕ್ಕೆ ಆಗಮಿಸಿದ್ದ 16 ಸಾವಿರ ಪ್ರಯಾಣಿಕರ ಆರ್ ಟಿಪಿಸಿಆರ್ ಟೆಸ್ಟ್ ಮಾಡಲಾಗಿದೆ. ಈ ಪೈಕಿ 18 ಪ್ರಯಾಣಿಕರಲ್ಲಿ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಾಂಡವೀಯಾ ಶುಕ್ರವಾರ ಸಂಸತ್ತಿಗೆ ತಿಳಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಸಚಿವರು, ಓಮಿಕ್ರಾನ್ ಪತ್ತೆಗಾಗಿ ಹೈ ರಿಸ್ಕ್ ರಾಷ್ಟ್ರಗಳಿಂದ ಬಂದಂತಹ ಪ್ರಯಾಣಿಕರಿಗೆ ಜೀನೊಮ್ ಸೀಕ್ವೆನ್ಸಿಂಗ್ ನಡೆಯುತ್ತಿರುವುದಾಗಿ ಮಾಹಿತಿ ನೀಡಿದರು.
ಕೇಂದ್ರ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಮುಂದಿನ ಯಾವುದೇ ಸವಾಲುಗಳನ್ನು ಎದುರಿಸಲು ಸಿದ್ಧವಾಗಿದೆ. ಮುಂಬರುವ ಕೋವಿಡ್-19 ಪ್ರಕರಣ ಸಮಸ್ಯೆ ಪರಿಹರಿಸಲು ಎಲ್ಲಾ ರಾಜ್ಯಗಳು ಸೂಕ್ತ ಔಷಧ ದಾಸ್ತಾನು ಹೊಂದುವಂತ ನೀತಿ ಅನುಸರಿಸಲಾಗುವುದು ಎಂದರು.
ವೈಜ್ಞಾನಿಕ ಸಲಹೆಗಳ ಆಧಾರದ ಮೇಲೆ ಮಕ್ಕಳಿಗೆ ಬೂಸ್ಟರ್ ಡೋಸ್ ಹಾಗೂ ಲಸಿಕೆ ನೀಡಿಕೆ ಕುರಿತು ನಿರ್ಧಾರ ತೆಗೆದುಕೊಳ್ಳವುದು ಎಂದು ಹೇಳಿದ ಸಚಿವರು, ವಿಜ್ಞಾನಿಗಳಲ್ಲಿ ನಂಬಿಕೆ ಇಡುವಂತೆ ಪ್ರತಿಪಕ್ಷಗಳಲ್ಲಿ ಅವರು ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


