ದೇಶ

ಟೋಲ್ ಪ್ಲಾಜಾದಲ್ಲಿ ಬ್ರೇಕ್ ವಿಫಲತೆ ನಂತರ ಸಮಯ ಪ್ರಜ್ಞೆ ಮೆರೆದು ಅಪಘಾತವನ್ನು ತಪ್ಪಿಸಿದ ಟ್ರಕ್ ಚಾಲಕ! ವಿಡಿಯೋ

ಉತ್ತರ ಪ್ರದೇಶದ ಟೋಲ್ ಪ್ಲಾಜಾವೊಂದರ ಬಳಿ ಮುಂದಿನ ವಾಹನಗಳಿಗೆ ಇನ್ನೇನು ಡಿಕ್ಕಿ ಹೊಡೆಯಿತು ಅನ್ನುವಷ್ಟರಲ್ಲಿ ಕ್ಷಣಾರ್ಧದಲ್ಲಿಯೇ ಟ್ರಕ್ ನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಚಾಲಕ ಮುಂದೆ ಆಗಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾನೆ.

ಟೋಲ್ ಪ್ಲಾಜಾದಲ್ಲಿ ಬ್ರೇಕ್ ವಿಫಲತೆ ನಂತರ ಸಮಯ ಪ್ರಜ್ಞೆ ಮೆರೆದು ಅಪಘಾತವನ್ನು ತಪ್ಪಿಸಿದ ಟ್ರಕ್ ಚಾಲಕ! ವಿಡಿಯೋ
ಟ್ರಕ್ ವಿಡಿಯೋ
Published On :

ನವದೆಹಲಿ: ಉತ್ತರ ಪ್ರದೇಶದ ಟೋಲ್ ಪ್ಲಾಜಾವೊಂದರ ಬಳಿ ಮುಂದಿನ ವಾಹನಗಳಿಗೆ ಇನ್ನೇನು ಡಿಕ್ಕಿ ಹೊಡೆಯಿತು ಅನ್ನುವಷ್ಟರಲ್ಲಿ ಕ್ಷಣಾರ್ಧದಲ್ಲಿಯೇ ಟ್ರಕ್ ನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಚಾಲಕ ಮುಂದೆ ಆಗಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾನೆ.

ದಾದ್ರಿ-ಲುಹರ್ಲಿ ಮಾರ್ಗದಲ್ಲಿ ಬರುತ್ತಿದ್ದ ಟ್ರಕ್  ಬ್ರೇಕ್ ವಿಫಲವಾಗಿದೆ. ಇದರಿಂದ ರಸ್ತೆ ಮಧ್ಯದಿಂದ ಅಡ್ಡಾದಿಡ್ಡಿಯಾಗಿ  ಬರುವ ಟ್ರಕ್ ಮುಂದೆ ಎರಡೂ ವಾಹನಗಳಿದ್ದರೂ ಅವುಗಳಿಗೆ ಡಿಕ್ಕಿ ಹೊಡೆಯದೇ  ಟೋಲ್ ಬೂತ್ ನ ಕೊನೆಯ ಪಥದಲ್ಲಿ ಸಾಗುವ ಮೂಲಕ ದೊಡ್ಡ ಅಪಘಾತವೊಂದು ತಪ್ಪಿದಂತಾಗಿದೆ. 

ಟ್ರಕ್ ಚಾಲಕ ಕಾರುಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಮುಂದಾದಾಗ ರಸ್ತೆಯ ಅಂಚಿನ ಭಾಗದಲ್ಲಿದ್ದ ಕೆಲವು ಸೆನ್ಸರ್ ಗಳು ಹಾಗೂ ವಿಭಜಕಗಳನ್ನು ಹೊಡೆದುರುಳಿಸಲಾಗಿದೆ. ನಂತರ ಟ್ರಕ್ ನ್ನು ನಿಯಂತ್ರಣ ತಂದು ರಸ್ತೆ ಮಧ್ಯೆ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.