ದೇಶ

ತಾಳೆಎಣ್ಣೆ ಆಮದು ನಿಯಂತ್ರಣಕ್ಕೆ ಖಾದ್ಯ ತೈಲಗಳ ರಾಷ್ಟ್ರೀಯ ಮಿಷನ್ ಜಾರಿಗೆ ಸಂಪುಟ ಅನುಮೋದನೆ

ತಾಳೆಎಣ್ಣೆ ಆಮದು ನಿಯಂತ್ರಿಸುವ ಪ್ರಮುಖ ನಿರ್ಧಾರ ಕೈಗೊಂಡಿದ್ದು, ಖಾದ್ಯ ತೈಲಗಳ ರಾಷ್ಟ್ರೀಯ ಮಿಷನ್ ಜಾರಿಗೆ ಸಂಪುಟ ಅನುಮೋದನೆ ನೀಡಿದೆ.

ತಾಳೆಎಣ್ಣೆ ಆಮದು ನಿಯಂತ್ರಣಕ್ಕೆ ಖಾದ್ಯ ತೈಲಗಳ ರಾಷ್ಟ್ರೀಯ ಮಿಷನ್ ಜಾರಿಗೆ ಸಂಪುಟ ಅನುಮೋದನೆ
ಖಾದ್ಯ ತೈಲಗಳ ರಾಷ್ಟ್ರೀಯ ಮಿಷನ್
Published On :

ನವದೆಹಲಿ: ತಾಳೆಎಣ್ಣೆ ಆಮದು ನಿಯಂತ್ರಿಸುವ ಪ್ರಮುಖ ನಿರ್ಧಾರ ಕೈಗೊಂಡಿದ್ದು, ಖಾದ್ಯ ತೈಲಗಳ ರಾಷ್ಟ್ರೀಯ ಮಿಷನ್ ಜಾರಿಗೆ ಸಂಪುಟ ಅನುಮೋದನೆ ನೀಡಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು, 'ಆಮದು ಮಾಡಿದ ಖಾದ್ಯ ತೈಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಖಾದ್ಯ ತೈಲಗಳು-ತೈಲ ಪಾಮ್ (NMEO-OP) ಮೇಲೆ ಕೇಂದ್ರ ಸಂಪುಟ ಬುಧವಾರ 11,040 ಕೋಟಿ ರೂ.ವೆಚ್ಚದಲ್ಲಿ ರಾಷ್ಟ್ರೀಯ  ಮಿಷನ್ ಜಾರಿಗೆ ಅನುಮೋದನೆ ನೀಡಿದೆ.

ಕ್ಯಾಬಿನೆಟ್ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು, ಈ ಯೋಜನೆಯು ತನ್ನ ಈಶಾನ್ಯ ಪ್ರದೇಶ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮೇಲೆ ವಿಶೇಷ ಗಮನವನ್ನು ಕೇಂದ್ರೀಕರಿಸುತ್ತದೆ ಎಂದು ಹೇಳಿದರು. 

ಈ ಯೋಜನೆಯು ಎಣ್ಣೆ ಬೀಜಗಳ ಅಡಿಯಲ್ಲಿ ಪ್ರದೇಶವನ್ನು ಹೆಚ್ಚಿಸುವುದು, ತಾಳೆ ಎಣ್ಣೆಯ ಉತ್ಪಾದಕತೆಯನ್ನು ಹೆಚ್ಚಿಸುವುದು ಮತ್ತು ಎಣ್ಣೆಬೀಜದ ತೋಟಗಳಿಗೆ ಸಹಾಯ ಮಾಡುತ್ತದೆ. ಅಂತೆಯೇ ಇದು ಬೃಹತ್ ಸಂಭಾವ್ಯ ಪ್ರದೇಶವನ್ನು ಬಳಸಿಕೊಳ್ಳಲು ಮತ್ತು ಪಾಮ್ ಎಣ್ಣೆಯ ಆಮದು ಅವಲಂಬನೆಯನ್ನು ಕಡಿಮೆ  ಮಾಡಲು ಸಹಾಯ ಮಾಡುತ್ತದೆ ಎಂದು ಅನುರಾಗ್ ಠಾಕೂರ್ ಹೇಳಿದರು.

ಈ ಯೋಜನೆಯು ತೈಲ ಪಾಮ್ ರೈತರಿಗೆ ಬೆಲೆ ಖಾತರಿಯನ್ನು ನೀಡುತ್ತದೆ. ಖಾದ್ಯ ಎಣ್ಣೆಗಳ ಆಮದುಗಳ ಮೇಲೆ ಹೆಚ್ಚಿನ ಅವಲಂಬನೆಯಿಂದಾಗಿ, ಖಾದ್ಯ ತೈಲಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಪ್ರಯತ್ನಗಳನ್ನು ಮಾಡುವುದು ಮುಖ್ಯವಾಗಿದೆ, ಇದರಲ್ಲಿ ತೈಲ ಪಾಮ್ ನ ಹೆಚ್ಚುತ್ತಿರುವ ಪ್ರದೇಶ ಮತ್ತು  ಉತ್ಪಾದಕತೆಯು ಪ್ರಮುಖ ಪಾತ್ರ ವಹಿಸುತ್ತದೆ" ಎಂದು ಠಾಕೂರ್ ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ 15 ರಂದು ಕೆಂಪು ಕೋಟೆಯಲ್ಲಿ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಹೊಸ ಕೇಂದ್ರ ಯೋಜನೆಯನ್ನು ಘೋಷಿಸಿದ ನಂತರ ಕೇಂದ್ರ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.