ದೇಶ

ಧುೃವ ಹೆಲಿಕಾಪ್ಟರ್ ಪತನ: 12 ದಿನಗಳ ನಂತರ ಪೈಲಟ್ ಶವ ಪತ್ತೆ

ಜಮ್ಮುವಿನ ಗಡಿಭಾಗದ ರಾಜ್‌ನೀತ್‌ ಸಾಗರ್‌ ಅಣೆಕಟ್ಟೆಯಲ್ಲಿ ಪತನಗೊಂಡಿದ್ದ ಸೇನೆಯ ಧ್ರುವ್ ಹೆಲಿಕಾಪ್ಟರ್‌ನ ಪೈಲಟ್ ಒಬ್ಬರ ಶವ ಅಪಘಾತವಾದ 12 ದಿನದ ನಂತರ ಭಾನುವಾರ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಧುೃವ ಹೆಲಿಕಾಪ್ಟರ್ ಪತನ: 12 ದಿನಗಳ ನಂತರ ಪೈಲಟ್ ಶವ ಪತ್ತೆ
ದ್ರುವ್ ಹೆಲಿಕಾಪ್ಟರ್ ಪತನ (ಪಿಟಿಟಿಚಿತ್ರ)
Published On :

ನವದೆಹಲಿ: ಜಮ್ಮುವಿನ ಗಡಿಭಾಗದ ರಾಜ್‌ನೀತ್‌ ಸಾಗರ್‌ ಅಣೆಕಟ್ಟೆಯಲ್ಲಿ ಪತನಗೊಂಡಿದ್ದ ಸೇನೆಯ ಧ್ರುವ್ ಹೆಲಿಕಾಪ್ಟರ್‌ನ ಪೈಲಟ್ ಒಬ್ಬರ ಶವ ಅಪಘಾತವಾದ 12 ದಿನದ ನಂತರ ಭಾನುವಾರ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಸೇನಾ ಮೂಲಗಳ ಪ್ರಕಾರ ಹೆಲಿಕಾಪ್ಟರ್ ನ ಪೈಲಟ್ ಲೆಫ್ಟಿನಂಟ್ ಕರ್ನಲ್‌ ಎ.ಎಸ್.ಬಾತ್ ಅವರ ಶವವು ಅಣೆಕಟ್ಟೆಯ 75.9 ಮೀಟರ್‌ ಆಳದಲ್ಲಿ ಪತ್ತೆಯಾಯಿತು ಎಂದು ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಂತೆಯೇ ನಾಪತ್ತೆಯಾಗಿರುವ ಮತ್ತೋರ್ವ ಪೈಲಟ್ ನ ಶವಕ್ಕಾಗಿ ಶೋಧ ಮುಂದುವರೆದಿದೆ.

ಈ ಹಿಂದೆ ಇಬ್ಬರು ಪೈಲಟ್‌ಗಳಿದ್ದ ಧ್ರುವ್ ಹೆಲಿಕಾಪ್ಟರ್ ಆ. 3ರಂದು ಅಣೆಕಟ್ಟೆಯಲ್ಲಿ ಪತನಗೊಂಡಿತ್ತು. ನಾಪತ್ತೆಯಾಗಿದ್ದ ಪೈಲಟ್‌ಗಳ ಪತ್ತೆಗೆ ಸೇನೆ, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಮತ್ತು ರಾಜ್ಯ ಪೊಲೀಸ್‌ ಪಡೆಯ ಸಿಬ್ಬಂದಿ ಜಂಟಿಯಾಗಿ ಸುಮಾರು 500 ಅಡಿ ಆಳದ ಅಣೆಕಟ್ಟೆಯಲ್ಲಿ ಶೋಧ ಕಾರ್ಯ  ಕೈಗೊಂಡಿದ್ದರು.

ಸತತ 12 ದಿನಗಳ ಕಾರ್ಯಾಚರಣೆ ಬಳಿಕ ಇಂದು ಓರ್ವ ಪೈಲಟ್ ಶವ ಪತ್ತೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.