ಶಾಂತಿ ಮಾತುಕತೆಗೆ ಯುಎಲ್ಎಫ್ಎ-ಐ ನ್ನು ಆಹ್ವಾನಿಸಿದ ಅಸ್ಸಾಂ ಸಿಎಂ
ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ ಆ.15 ರಂದು ಯುಎಲ್ಎಫ್ಎ-ಐ ನ ಮುಖ್ಯಸ್ಥ ಪರೇಶ್ ಬರುವಾ ಅವರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ.

ಗುವಾಹಟಿ: ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ ಆ.15 ರಂದು ಯುಎಲ್ಎಫ್ಎ-ಐ ನ ಮುಖ್ಯಸ್ಥ ಪರೇಶ್ ಬರುವಾ ಅವರನ್ನು ಶಾಂತಿ ಮಾತುಕತೆಗೆ ಆಹ್ವಾನಿಸಿದ್ದಾರೆ.
ಇದೇ ವೇಳೆ ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿರುವ ಕೋವಿಡ್-19 ಯೋಧರಿಗೆ ಹಿಮಂತ ಬಿಸ್ವ ಶರ್ಮ ಕೃತಜ್ಞತೆ ಸಲ್ಲಿಸಿದ್ದಾರೆ.
75 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಾತನಾಡಿರುವ ಅವರು, ಅಸ್ಸಾಂ ಈ ಬಾರಿ ದಶಕಗಳಲ್ಲೇ ಮೊದಲ ಬಾರಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಯುಎಲ್ಎಫ್ಎ ಸೇರಿದಂತೆ ಯಾವುದೇ ಉಗ್ರ ಸಂಘಟನೆಯ ಪ್ರತಿಭಟನೆ ಇಲ್ಲದೇ ನಡೆಸುತ್ತಿದೆ. ಅಸ್ಸಾಂ ನ ಜನತೆಯ ಪರವಾಗಿ, ಯುಎಲ್ಎಫ್ಎ-ಐ ನ ಮುಖ್ಯಸ್ಥ ಪರೇಶ್ ಬರುವಾ ಅವರನ್ನು ಮಾತುಕತೆಗೆ ಆಹ್ವಾನಿಸುತ್ತಿದ್ದೇನೆ. ನಮ್ಮ ರಾಜ್ಯದ ಯಾವುದೇ ಯುವಕನೂ ಹತ್ಯೆಗೀಡಾಗಬಾರದು ಎಂದು ಅವರು ಕರೆ ನೀಡಿದ್ದಾರೆ.
ಪ್ರತಿ ವರ್ಷದ ಗಣರಾಜ್ಯ ದಿನಾಚರಣೆ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಅಸ್ಸಾಂ ಬಂದ್ ಗೆ ಕರೆ ನೀಡುತ್ತಿದ್ದ ಯುಎಲ್ಎಫ್ಎ-ಐ ಈ ಬಾರಿ ದಶಕಗಳಲ್ಲೇ ಮೊದಲ ಬಾರಿಗೆ ಬಂದ್ ಗೆ ಕರೆ ನೀಡಿರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


