50 ವರ್ಷಗಳ ಹಿಂದೆ ಅಧಿಕಾರಿಗಳ ಕಾಲಿಗೆ ಬೀಳಬೇಕಾಗಿತ್ತು, ಮೋದಿ ಅವಧಿಯಲ್ಲಿ ಪರಿಸ್ಥಿತಿ ಬದಲಾಗಿದೆ: ಪೂನವಾಲಾ
50 ವರ್ಷಗಳ ಹಿಂದೆ ಅನುಮತಿ ಪಡೆಯಲು "ಅಧಿಕಾರಿಗಳ ಕಿರುಕುಳ"ದಿಂದಾಗಿ ಉದ್ಯಮವು ಹೇಗೆ "ಸಂಕಷ್ಟಗಳನ್ನು" ಎದುರಿಸುತ್ತಿತ್ತು ಎಂಬುದನ್ನು ನೆನಪಿಸಿಕೊಂಡ ಕೋವಿಡ್ ಲಸಿಕೆ ತಯಾರಕ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ...

ಪುಣೆ: 50 ವರ್ಷಗಳ ಹಿಂದೆ ಅನುಮತಿ ಪಡೆಯಲು "ಅಧಿಕಾರಿಗಳ ಕಿರುಕುಳ"ದಿಂದಾಗಿ ಉದ್ಯಮವು ಹೇಗೆ "ಸಂಕಷ್ಟಗಳನ್ನು" ಎದುರಿಸುತ್ತಿತ್ತು ಎಂಬುದನ್ನು ನೆನಪಿಸಿಕೊಂಡ ಕೋವಿಡ್ ಲಸಿಕೆ ತಯಾರಕ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್ಐಐ) ಅಧ್ಯಕ್ಷ ಡಾ. ಸೈರಸ್ ಪೂನವಾಲಾ ಅವರು, ಈಗ ರೆಡ್-ಟ್ಯಾಪಿಸಂ ಮತ್ತು ಲೈಸೆನ್ಸ್ ರಾಜ್ ಆಳ್ವಿಕೆ ಕಡಿಮೆಯಾಗಿದೆ ಎಂದು ಮೋದಿ ಸರ್ಕಾರವನ್ನು ಹಾಡಿ ಹೊಗಳಿದ್ದಾರೆ.
ಲೋಕಮಾನ್ಯ ತಿಲಕ್ ಟ್ರಸ್ಟ್ ನೀಡುವ ಲೋಕಮಾನ್ಯತ್ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪೂನವಾಲಾ ಅವರು, ಹಿಂದೆ ಅನುಮತಿ ಪಡೆಯಲು ಅಧಿಕಾರಿಗಳಿಗೆ ಮತ್ತು ಡ್ರಗ್ ಕಂಟ್ರೋಲರ್‌ಗಳ ಕಾಲಿಗೆ ಬೀಳಬೇಕಾಗಿತ್ತು. ಈಗ ಪರಿಸ್ಥಿತಿ ಬದಲಾಗಿದೆ, ಇದರ ಪರಿಣಾಮವಾಗಿ ಎಸ್ಐಐ ಕೋವಿಡ್ ಲಸಿಕೆ ಕೋವಿಶೀಲ್ಡ್ ಅನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಸಾಧ್ಯವಾಯಿತು ಎಂದರು.
"ನಾನು ನನ್ನ ಪ್ರೀತಿಯ ದಿವಂಗತ ಹೆಂಡತಿ ವಿಲ್ಲೂ ಜೊತೆ ಮದುವೆಯಾದ ದಿನ 1966 ರಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಅನ್ನು ಸ್ಥಾಪಿಸಲಾಯಿತು. ಹೀಗಾಗಿ ನಾನು ಈ ಪ್ರಶಸ್ತಿಯನ್ನು ಪತ್ನಿಗೆ ಅರ್ಪಿಸುತ್ತೇನೆ ಎಂದರು.
ಐವತ್ತು ವರ್ಷಗಳ ಹಿಂದೆ, ವಿದ್ಯುತ್, ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳ ಅನುಮತಿ ಪಡೆಯಲು ಉದ್ಯಮವು ಹಲವು ಕಷ್ಟಗಳನ್ನು ಎದುರಿಸಬೇಕಾಗಿತ್ತು. ಅಧಿಕಾರಿಗಳಿಂದ ಕಿರುಕುಳವನ್ನು ಎದುರಿಸಬೇಕಾಯಿತ ಎಂದು ಪೂನವಾಲಾ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


