ಕುಂದುಕೊರತೆ ನೋಂದಾಯಿಸಲು ಮೂರು ಅಧಿಕೃತ ಇ-ಮೇಲ್ ಐಡಿ ನೀಡಿದ ಆದಾಯ ತೆರಿಗೆ ಇಲಾಖೆ
ಇ-ಮೌಲ್ಯಮಾಪನ ಯೋಜನೆಯಡಿ ಕುಂದುಕೊರತೆಗಳನ್ನು ನೋಂದಾಯಿಸಲು ಆದಾಯ ತೆರಿಗೆ (ಐ-ಟಿ) ಇಲಾಖೆ ಶನಿವಾರ ಮೂರು ಅಧಿಕೃತ ಇಮೇಲ್ ಐಡಿಗಳನ್ನು ನೀಡಿದೆ.

ನವದೆಹಲಿ: ಇ-ಮೌಲ್ಯಮಾಪನ ಯೋಜನೆಯಡಿ ಕುಂದುಕೊರತೆಗಳನ್ನು ನೋಂದಾಯಿಸಲು ಆದಾಯ ತೆರಿಗೆ (ಐ-ಟಿ) ಇಲಾಖೆ ಶನಿವಾರ ಮೂರು ಅಧಿಕೃತ ಇಮೇಲ್ ಐಡಿಗಳನ್ನು ನೀಡಿದೆ.
ಈ ಕುರಿತಂತೆ ಐಟಿ ಇಲಾಖೆ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ತೆರಿಗೆದಾರರ ಚಾರ್ಟರ್‌ಗೆ ಅನುಗುಣವಾಗಿ ತೆರಿಗೆದಾರರ ಸೇವೆಗಳನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ, ಆದಾಯ ತೆರಿಗೆ ಇಲಾಖೆಯು ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರುಗಳನ್ನು ದಾಖಲಿಸಲು ಮೀಸಲಾದ ಇ-ಮೇಲ್ ಐಡಿಗಳನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದೆ.
samadhan.faceless.assessment@incometax.gov.in; samadhan.faceless.penalty@incometax.gov.in; ಮತ್ತು samadhan.faceless.appeal@incometax.gov.in ಎಂಬ ಈ ಮೂರು ಪ್ರತ್ಯೇಕ ಇಮೇಲ್ ಐಡಿಗಳ ಮೂಲಕ ಕುಂದುಕೊರತೆಗಳನ್ನು ಸಲ್ಲಿಕೆ ಮಾಡಬಹುದು.
ಏನಿದು ಫೇಸ್ ಲೆಸ್ ವ್ಯವಸ್ಥೆ
ತೆರಿಗೆದಾರರು ಅಥವಾ ಮೌಲ್ಯಮಾಪಕರು ಆದಾಯ ತೆರಿಗೆ-ಸಂಬಂಧಿತ ವ್ಯವಹಾರಗಳಿಗಾಗಿ ಐ-ಟಿ ಇಲಾಖಾ ಕಚೇರಿಗೆ ಭೇಟಿ ನೀಡುವ ಅಥವಾ ಇಲಾಖೆಯ ಅಧಿಕಾರಿಯನ್ನು ಮುಖತಃ ಭೇಟಿ ಮಾಡುವ ಅಗತ್ಯವಿಲ್ಲ ಇದಕ್ಕೆ ಫೇಸ್ ಲೆಸ್ ವ್ಯವಸ್ಥೆ ಎನ್ನಲಾಗುತ್ತದೆ.
ಕೇಂದ್ರ ಎಲೆಕ್ಟ್ರಾನಿಕ್-ಆಧಾರಿತ ವ್ಯವಸ್ಥೆಯು ಅಪಾಯದ ನಿಯತಾಂಕಗಳು ಮತ್ತು ಹೊಂದಾಣಿಕೆಯಿಲ್ಲದ ಆಧಾರದ ಮೇಲೆ ಪರಿಶೀಲನೆಗಾಗಿ ತೆರಿಗೆ ಪಾವತಿಯನ್ನು ತೆಗೆದುಕೊಳ್ಳುತ್ತದೆ ಮತ್ತು ನಂತರ ಅವುಗಳನ್ನು ಯಾವುದೇ ನಗರದಲ್ಲಿ ಐಟಿ ಅಧಿಕಾರಿಗಳ ತಂಡಕ್ಕೆ ಯಾದೃಚ್ಛಿಕವಾಗಿ ಹಂಚುತ್ತದೆ. ಈ ಅಧಿಕಾರಿಗಳ ಪರಿಶೀಲನೆಯನ್ನು ಮತ್ತೊಂದು ಯಾದೃಚ್ಛಿಕವಾಗಿ ಆಯ್ಕೆ ಮಾಡಿದ ಸ್ಥಳದಲ್ಲಿ ಅಧಿಕಾರಿಗಳು ಪರಿಶೀಲಿಸುತ್ತಾರೆ ಎಂದು ಹೇಳಲಾಗಿದೆ.
ಈ ಫೇಸ್ ಲೆಸ್ ವ್ಯವಸ್ಥೆಯನ್ನು ಕೇಂದ್ರ ಸರ್ಕಾರವು 2019 ರಲ್ಲಿ ಆರಂಭಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


