ಜಮ್ಮು ಕಾಶ್ಮೀರ: ಸಾಂಬಾ ಜಿಲ್ಲೆಯ 3 ಕಡೆ ಡ್ರೋಣ್ ಹಾರಾಟ, ಆತಂಕಗೊಂಡ ಸ್ಥಳೀಯರು
ಭಾರತದ ಗಡಿ ಪ್ರದೇಶದಲ್ಲಿ ಡ್ರೋಣ್'ಗಳ ಹಾರಾಟ ಹೆಚ್ಚಾಗುತ್ತಲೇ ಇದೆ .ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯ ಬ್ಯಾರಿ ಬ್ರಾಹ್ಮಣ ಏರಿಯಾದ ಮೂರು ಪ್ರದೇಶಗಳಲ್ಲಿ ಭಾನುವಾರ ರಾತ್ರಿ ಡ್ರೋಣ್ ಗಳ ಹಾರಾಟ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಶ್ರೀನಗರ: ಭಾರತದ ಗಡಿ ಪ್ರದೇಶದಲ್ಲಿ ಡ್ರೋಣ್'ಗಳ ಹಾರಾಟ ಹೆಚ್ಚಾಗುತ್ತಲೇ ಇದೆ .ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯ ಬ್ಯಾರಿ ಬ್ರಾಹ್ಮಣ ಏರಿಯಾದ ಮೂರು ಪ್ರದೇಶಗಳಲ್ಲಿ ಭಾನುವಾರ ರಾತ್ರಿ ಡ್ರೋಣ್ ಗಳ ಹಾರಾಟ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ಸಾಂಬಾದ ಎಸ್'ಪಿ ರಾಜೇಶ್ ಶರ್ಮಾ ಅವರು ಮಾಹಿತಿ ನೀಡಿದ್ದು, ಸಾಂಬಾದ ಬರಿಬ್ರಾಹ್ಮಣ ಪ್ರದೇಶದಲ್ಲಿ ತಡರಾತ್ರಿ ಶಂಕಿತ ಡ್ರೋಣ್ ಹಾರಾಟ ನಡೆಸಿದೆ ಎಂದು ತಿಳಿಸಿದ್ದಾರೆ.
ಬ್ಯಾರಿ ಬ್ರಾಹ್ಮಣದ 3 ಪ್ರದೇಶಗಳಲ್ಲಿ ಡ್ರೋನ್ ಕಾಣಿಸಿಕೊಂಡಿದ್ದು, ಪೊಲೀಸ್ ಠಾಣೆಯ ಸಮೀಪ ಒಂದು ಡ್ರೋಣ್ ಹಾರಾಡ ಕಂಡುಬಂದಿದ್ದರೆ ಮತ್ತೊಂದು ಬಲೋಲ್ ಸೇತುವೆ ಬಳಿ ಪತ್ತೆಯಾಗಿದೆ. ಬ್ಯಾರಿ ಬ್ರಾಹ್ಮಣ, ಚಿಲಾದ್ಯ ಹಾಗೂ ಗಾಗ್ವಾಲ್ ಪ್ರದೇಶಗಳಲ್ಲಿ ಏಕಕಾಲಕ್ಕೆ ವೇಳೆಗೆ ಡ್ರೋನ್ ಕಾಣಿಸಿಕೊಂಡಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ರಾಜೇಶ್ ಶರ್ಮಾ ಮಾಹಿತಿ ನೀಡಿದ್ದಾರೆ.
ಕಳೆದ ಜೂನ್ ತಿಂಗಳಿನಲ್ಲಿ ಜಮ್ಮುವಿನ ವಾಯುನೆಲೆ ಬಳಿ ಮೊದಲ ಬಾರಿಗೆ ಡ್ರೋಣ್ ದಾಳಿ ನಡೆದಿತ್ತು. ಅದಾದ ಬಳಿಕ ಜಮ್ಮು-ಕಾಶ್ಮೀರದ ಅನೇಕ ಕಡೆಗಳಲ್ಲಿ ಹೀಗೆ ಡ್ರೋಣ್ ಹಾರಾಟ ಪತ್ತೆಯಾಗುತ್ತಲೇ ಇದೆ. ಇತ್ತೀಚೆಗೆ ಕಾಲಚಕ್ ಏರಿಯಾದಲ್ಲಿ ಹಾರಾಟ ನಡೆಸುತ್ತಿದ್ದ ಡ್ರೋಣ್'ನ್ನು ಭದ್ರತಾಪಡೆಗಳು ಹೊಡೆದುರುಳಿಸಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


