ಸುಂಕ ಸಹಕಾರ ಕುರಿತು ಬ್ರಿಟನ್‌ನೊಂದಿಗಿನ ಒಪ್ಪಂದಕ್ಕೆ ಕೇಂದ್ರ ಸಂಪುಟ ಅನುಮೋದನೆ
ಸುಂಕ ಸಹಕಾರ ಮತ್ತು ಸುಂಕ ವಿಷಯಗಳಲ್ಲಿ ಪರಸ್ಪರ ಆಡಳಿತಾತ್ಮಕ ನೆರವು ಕುರಿತ ಒಪ್ಪಂದಗಳಿಗೆ ಭಾರತ ಮತ್ತು ಬ್ರಿಟನ್ ನಡುವಿನ ಒಪ್ಪಂದಕ್ಕೆ ಸಹಿ ಹಾಕಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ನವದೆಹಲಿ: ಸುಂಕ ಸಹಕಾರ ಮತ್ತು ಸುಂಕ ವಿಷಯಗಳಲ್ಲಿ ಪರಸ್ಪರ ಆಡಳಿತಾತ್ಮಕ ನೆರವು ಕುರಿತ ಒಪ್ಪಂದಗಳಿಗೆ ಭಾರತ ಮತ್ತು ಬ್ರಿಟನ್ ನಡುವಿನ ಒಪ್ಪಂದಕ್ಕೆ ಸಹಿ ಹಾಕಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಸುಂಕ ಅಪರಾಧಗಳ ತಡೆಗಟ್ಟುವಿಕೆ ಮತ್ತು ತನಿಖೆಗೆ ಸಂಬಂಧಿಸಿದ ಮಾಹಿತಿಯ ಲಭ್ಯತೆಗೆ ಈ ಒಪ್ಪಂದವು ಸಹಾಯ ಮಾಡುತ್ತದೆ.
ಈ ಒಪ್ಪಂದವು ವ್ಯಾಪಾರಕ್ಕೆ ಅನುಕೂಲವಾಗಲಿದೆ ಮತ್ತು ದೇಶಗಳ ನಡುವೆ ವಹಿವಾಟು ನಡೆಸುವ ಸರಕುಗಳ ಸಮರ್ಥ ಅನುಮತಿಯನ್ನು ಖಚಿತಪಡಿಸುತ್ತದೆ. ಎರಡೂ ಪಕ್ಷಗಳ ಅಧಿಕೃತ ಪ್ರತಿನಿಧಿಗಳು ಸಹಿ ಮಾಡಿದ ನಂತರ ಈ ಒಪ್ಪಂದಗಳು ಜಾರಿಗೆ ಬರಲಿದೆ.
ಪ್ರಸ್ತಾವಿತ ಒಪ್ಪಂದದ ಕರಡು ಪಠ್ಯವನ್ನು ಎರಡು ಕಸ್ಟಮ್ಸ್ ಆಡಳಿತಗಳ ಒಪ್ಪಿಗೆಯೊಂದಿಗೆ ಅಂತಿಮಗೊಳಿಸಲಾಗಿದೆ.
ಈ ಒಪ್ಪಂದವು ಭಾರತೀಯ ಸುಂಕ ಕಾಳಜಿ,ವಿಶೇಷವಾಗಿ ಕಸ್ಟಮ್ಸ್ ಮೌಲ್ಯದ ನಿಖರತೆ, ಸುಂಕದ ವರ್ಗೀಕರಣ ಮತ್ತು ಉಭಯ ದೇಶಗಳ ನಡುವೆ ವಹಿವಾಟು ನಡೆಸುವ ಸರಕುಗಳ ಮೂಲದ ಬಗ್ಗೆ ಮಾಹಿತಿ ವಿನಿಮಯ ಮಾಡುವ ಕ್ಷೇತ್ರದ ಅವಶ್ಯಕತೆಗಳನ್ನು ಒಳಗೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


