ದೇಶ

ಇಂದು ಭಗವಾನ್ ಮಹಾವೀರ ಜಯಂತಿ: ಗಣ್ಯರಿಂದ ಶುಭಾಶಯ

ಇಂದು ಭಗವಾನ್ ಮಹಾವೀರ ಜಯಂತಿ.ಇದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ,ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರ ಜನತೆಗೆ ಶುಭಾಶಯ ಕೋರಿದ್ದಾರೆ.

ಇಂದು ಭಗವಾನ್ ಮಹಾವೀರ ಜಯಂತಿ: ಗಣ್ಯರಿಂದ ಶುಭಾಶಯ
ಮಹಾವೀರ, ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ
Published On :

ನವದೆಹಲಿ: ಇಂದು ಭಗವಾನ್ ಮಹಾವೀರ ಜಯಂತಿ.ಇದರ ಅಂಗವಾಗಿ ಪ್ರಧಾನಿ  ನರೇಂದ್ರ ಮೋದಿ,ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಜನತೆಗೆ ಶುಭಾಶಯ ಕೋರಿದ್ದಾರೆ.

ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ದೇಶ ಹೋರಾಡುತ್ತಿರುವ ಸಂದರ್ಭದಲ್ಲಿ, ಭಗವಾನ್  ಮಹಾವೀರ ಎಲ್ಲರನ್ನು ಆರೋಗ್ಯದಿಂದ ಇಡಲಿ ಹಾಗೂ ನಮ್ಮ ಪ್ರಯತ್ನದೊಂದಿಗೆ ಯಶಸ್ವಿಯಾಗಲು ಆಶೀರ್ವದಿಸಲಿ ಎಂದು ಪ್ರಾರ್ಥಿಸುವುದಾಗಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೂಡಾ ದೇಶದ ಜನತೆಗೆ ಮಹಾವೀರ ಜಯಂತಿಯ ಶುಭಾಶಯ ಕೋರಿದ್ದು,  ಅವರ ಬೋಧನೆಗಳನ್ನು ಪಾಲಿಸುವಂತೆ ಹಾಗೂ ಸಾಮೂಹಿಕ ಶಿಸ್ತಿನ ಮೂಲಕ ಕೋವಿಡ್-19 ಸೋಲಿಸಲು ಪಣ ತೊಡುವಂತೆ ಜನರಿಗೆ ಕರೆ ನೀಡಿದ್ದಾರೆ.

ಅಧಿಕೃತ ನಿವಾಸ ಕಾವೇರಿಯಲ್ಲಿ ಭಗವಾನ್ ಮಹಾವೀರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಾಡಿನ ಸಂಕಷ್ಠಗಳೆಲ್ಲಾ ದೂರಸರಿದು ಜನರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದರು.  ಮಹಾವೀರರ ಆಧ್ಯಾತ್ಮಿಕ ಉಪದೇಶಗಳ ಬೆಳಕು ಸದಾ ನಮಗೆ ದಾರಿ ದೀಪವಾಗಿರಲಿ ಎಂದು ಟ್ವೀಟ್ ಸಂದೇಶದಲ್ಲಿತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.