ದೇಶ

ಏಪ್ರಿಲ್ 25 ರಿಂದ ಮೇ 3 ರವರೆಗೆ  ಭಾರತದಿಂದ ವಿಮಾನಗಳ ಹಾರಾಟ ನಿರ್ಬಂಧಿಸಿದ ಯುಎಇ

ದೇಶದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವಂತೆಯೇ, ಏಪ್ರಿಲ್ 25 ರಿಂದ ಮೇ 3 ರವರೆಗೆ ಭಾರತದಿಂದ ವಿಮಾನಗಳ ಹಾರಾಟವನ್ನು ರದ್ದುಪಡಿಸುವುದಾಗಿ ಯುಎಇ ಗುರುವಾರ ಪ್ರಕಟಿಸಿದೆ.

ಏಪ್ರಿಲ್ 25 ರಿಂದ ಮೇ 3 ರವರೆಗೆ  ಭಾರತದಿಂದ ವಿಮಾನಗಳ ಹಾರಾಟ ನಿರ್ಬಂಧಿಸಿದ ಯುಎಇ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ದೇಶದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವಂತೆಯೇ,  ಏಪ್ರಿಲ್ 25 ರಿಂದ ಮೇ 3 ರವರೆಗೆ  ಭಾರತದಿಂದ ವಿಮಾನಗಳ ಹಾರಾಟವನ್ನು ರದ್ದುಪಡಿಸುವುದಾಗಿ ಯುಎಇ ಗುರುವಾರ ಪ್ರಕಟಿಸಿದೆ.

ಭಾರತದಿಂದ ಪ್ರಯಾಣಿಕರು ಬೇರೆ ರಾಷ್ಟ್ರಗಳ ಮೂಲಕ ಯುಎಇ ಪ್ರವೇಶಿಸುವುದಕ್ಕೂ ನಿರ್ಬಂಧ ವಿಧಿಸಲಾಗಿದೆ. ಪ್ರಯಾಣಿಕರು ಇತರೆ ರಾಷ್ಟ್ರಗಳಲ್ಲಿ 14 ದಿನಗಳ ವಾಸ್ತವ್ಯ ಹೂಡಿದ್ದರೆ, ತದನಂತರದಲ್ಲಿ ಯುಎಇ ಪ್ರವೇಶಕ್ಕೆ ಅವಕಾಶ ಸಿಗಲಿದೆ.

ಉಭಯ ರಾಷ್ಟ್ರಗಳ ನಡುವೆ ಕಾರ್ಗೊ ವಿಮಾನಗಳು ಹಾಗೂ ಯುಎಇನಿಂದ ಭಾರತಕ್ಕೆ ಬಂದಿಳಿಯುವ ವಿಮಾನಗಳ ಮೇಲೆ ಯಾವುದೇ ನಿರ್ಬಂಧ ಇರುವುದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.