ದೇಶ

ಭಾರತದಲ್ಲಿ ಹೊಸ ಕೋವಿಡ್-19 ಬಿಕ್ಕಟ್ಟು: ರೋಗನಿರೋಧಕ ಶಕ್ತಿಯನ್ನೂ ಮೀರಿ ತಲೆ ಎತ್ತುತ್ತಿದೆ ಹೊಸ ರೂಪಾಂತರಿ ಕೊರೋನಾ!  

ಎರಡನೇ ಅಲೆಯಲ್ಲಿ ಡಬಲ್ ರೂಪಾಂತರಿ ಕೊರೋನಾ ವೈರಾಣು ತೀವ್ರ ಸ್ವರೂಪದಲ್ಲಿ ಹರಡುತ್ತಿರುವುದರ ನಡುವೆಯೇ ಹೊಸ ತಲೆನೋವು ಭಾರತಕ್ಕೆ ಎದುರಾಗಿದೆ.

ಭಾರತದಲ್ಲಿ ಹೊಸ ಕೋವಿಡ್-19 ಬಿಕ್ಕಟ್ಟು: ರೋಗನಿರೋಧಕ ಶಕ್ತಿಯನ್ನೂ ಮೀರಿ ತಲೆ ಎತ್ತುತ್ತಿದೆ ಹೊಸ ರೂಪಾಂತರಿ ಕೊರೋನಾ!  
ಕೊರೋನಾ
Published On :

ನವದೆಹಲಿ: ಎರಡನೇ ಅಲೆಯಲ್ಲಿ ಡಬಲ್ ರೂಪಾಂತರಿ ಕೊರೋನಾ ವೈರಾಣು ತೀವ್ರ ಸ್ವರೂಪದಲ್ಲಿ ಹರಡುತ್ತಿರುವುದರ ನಡುವೆಯೇ ಹೊಸ ತಲೆನೋವು ಭಾರತಕ್ಕೆ ಎದುರಾಗಿದೆ. 

ಜೀನೋಮ್ ತಜ್ಞರ ಅಧ್ಯಯನದ ಪ್ರಕಾರ, ಕೊರೋನಾದ ಮತ್ತೊಂದು ವಂಶಾವಳಿ B.1.618  ರೋಗನಿರೋಧಕ ಶಕ್ತಿಯನ್ನೂ ಮೀರಿ ಹರಡುವ ಸಾಮರ್ಥ್ಯವನ್ನು ಹೊಂದಿದ್ದು, ಪಶ್ಚಿಮ ಬಂಗಾಳದಲ್ಲಿ ಹೆಚ್ಚಾಗಿ ಹರಡುತ್ತಿದೆ ಎಂದು ಎಚ್ಚರಿಸಿದ್ದಾರೆ. 

ಬಂಗಾಳ-ಮೂಲದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಬಯೋಮೆಡಿಕಲ್ ಜೀನೋಮಿಕ್ಸ್ B.1.618 ಸೀಕ್ವೆನ್ಸ್ ಆಧಾರದಲ್ಲಿ ತಜ್ಞರು ನೀಡಿರುವ ಮಾಹಿತಿಯ ಪ್ರಕಾರ ಹೊಸ ರೂಪಾಂತರಿ ಕೊರೋನಾ, E484K ಸೇರಿದಂತೆ  ವಿಶಿಷ್ಟವಾದ ಆನುವಂಶಿಕ ರೂಪಾಂತರಗಳ ಗುಣಲಕ್ಷಣಗಳನ್ನು ಹೊಂದಿದ್ದು, ಮೊನೊಕ್ಲೋನಲ್ ಪ್ರತಿಕಾಯಗಳು ಚೇತರಿಸಿಕೊಳ್ಳುವ ಪ್ಲಾಸ್ಮಾದ ಪ್ಯಾನಲ್ ಗಳನ್ನೂ ಮೀರಿ ಹರಡುವ ಸಾಮರ್ಥ್ಯ ಹೊಂದಿದೆ. 

B.1.618 ವಂಶಾವಳಿಗಳ ಪ್ರಾರಂಭಿಕ ಸೀಕ್ವೆನ್ಸ್ ಗಳು ಪಶ್ಚಿಮ ಬಂಗಾಳದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು. ಇದೇ ಮಾದರಿಯ ವೈರಾಣು ದೇಶದ ವಿವಿಧ ಭಾಗಗಳಲ್ಲಿ ಕಂಡುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.