ಪೆರು ನಲ್ಲಿ ಹೆಲಿಕಾಪ್ಟರ್ ಪತನ: ಐವರು ಸೈನಿಕರು ಸಾವು
ಪೆರು ದೇಶದ ಕುಸ್ಕೊ ಪ್ರಾಂತ್ಯದಲ್ಲಿ ಸೇನೆಯ ಹೆಲಿಕಾಪ್ಟರ್ ಪತನಗೊಂಡು ಕನಿಷ್ಠ ಐವರು ಪೆರು ಸೇನೆಯ ಸೈನಿಕರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸಶಸ್ತ್ರ ಪಡೆಗಳ ಜಂಟಿ ಕಮಾಂಡ್ (ಸಿಸಿಎಫ್‌ಎಫ್‌ಎಎ) ತಿಳಿಸಿದೆ.

ಲಿಮಾ: ಪೆರು ದೇಶದ ಕುಸ್ಕೊ ಪ್ರಾಂತ್ಯದಲ್ಲಿ ಸೇನೆಯ ಹೆಲಿಕಾಪ್ಟರ್ ಪತನಗೊಂಡು ಕನಿಷ್ಠ ಐವರು ಪೆರು ಸೇನೆಯ ಸೈನಿಕರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸಶಸ್ತ್ರ ಪಡೆಗಳ ಜಂಟಿ ಕಮಾಂಡ್ (ಸಿಸಿಎಫ್‌ಎಫ್‌ಎಎ) ತಿಳಿಸಿದೆ.
ಶನಿವಾರ ಬೆಳಿಗ್ಗೆ ಈ ದುರಂತ ಸಂಭವಿಸಿದ್ದು, ಒಟ್ಟು 12 ಸೈನಿಕರನ್ನು ಹೊತ್ತ ಹೆಲಿಕಾಪ್ಟರ್ ಅಕ್ರಮ ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಜಾಗೃತ ಕಾರ್ಯಾಚರಣೆ ನಡೆಸುತ್ತಿತ್ತು ಎಂಬ ಪ್ರಕಟಣೆಯನ್ನು ಸಿಸಿಎಫ್‌ಎಫ್‌ಎ ಟ್ವಿಟರ್‌ನಲ್ಲಿ ಬಿಡುಗಡೆ ಮಾಡಿದೆ.
‘ಸಶಸ್ತ್ರ ಪಡೆಗಳ ಧೈರ್ಯಶಾಲಿ ಸಿಬ್ಬಂದಿ ಸಾವಿಗೆ ಸಶಸ್ತ್ರ ಪಡೆಗಳ ಜಂಟಿ ಕಮಾಂಡ್ ವಿಷಾಧಿಸುತ್ತಿದೆ. ಮೃತರ ಕುಟುಂಬಗಳಿಗೆ ಸಂತಾಪವನ್ನು ವ್ಯಕ್ತಪಡಿಸುತ್ತಿದೆ.’ ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


