ಈ ವರ್ಷ ಸಾಮಾನ್ಯ ಮುಂಗಾರು: ಹವಾಮಾನ ಇಲಾಖೆ ಮುನ್ಸೂಚನೆ
ಈ ವರ್ಷ ನೈರುತ್ಯ ಮುಂಗಾರು ಸಾಧಾರಣವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ನೈರುತ್ಯ ಮುಂಗಾರು ಪರಿಣಾಮ ದೇಶಾದ್ಯಂತ ಶೇ 98 ರಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ರಾಜೀವನ್ ತಿಳಿಸಿದ್ದಾರೆ.

ನವದೆಹಲಿ: ಈ ವರ್ಷ ನೈರುತ್ಯ ಮುಂಗಾರು ಸಾಧಾರಣವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ನೈರುತ್ಯ ಮುಂಗಾರು ಪರಿಣಾಮ ದೇಶಾದ್ಯಂತ ಶೇ 98 ರಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ರಾಜೀವನ್ ತಿಳಿಸಿದ್ದಾರೆ.
ಪ್ರತಿವರ್ಷ ಜೂನ್ 1ರೊಳಗೆ ನೈರುತ್ಯ ಮುಂಗಾರು ಕೇರಳಕ್ಕೆ ಪ್ರವೇಶಿಸಲಿದೆ. ನೈರುತ್ಯ ಮಾರುತಗಳಿಂದ ದೇಶಾದ್ಯಂತ ವ್ಯಾಪಕ ಮಳೆಯಾಗುತ್ತದೆ. ಕಳೆದ ವರ್ಷ ದೇಶಾದ್ಯಂತ ವಾಡಿಕೆಯ ಸರಾಸರಿಗಿಂತ ಹೆಚ್ಚು ಮಳೆಯಾಗಿತ್ತು. ಭಾರತದಲ್ಲಿ ಮಳೆಗಾಲ ಜೂನ್ ಹಾಗೂ ಸೆಪ್ಟೆಂಬರ್ ನಡುವಣ ಅವಧಿಯಾಗಿದೆ.
ಆದರೆ, ಈ ಬಾರಿ ಆ ಸಮಯದಲ್ಲಿ ಶೇ 96 ರಿಂದ 104 ರಷ್ಟು ಮಳೆ ಬೀಳುವ ಮುನ್ಸೂಚನೆಯನ್ನು ಐಎಂಡಿ ಹೇಳಿಕೆಯಲ್ಲಿ ತಿಳಿಸಿದೆ. ಆದರೆ ಸರಾಸರಿ ಶೇ 98 ರಷ್ಟು ಆಗುವ ಸಾಧ್ಯತೆ ಇದೆ ಎಂದು ಅಂದಾಜಿಸಿದೆ. ಈ ಅಂದಾಜು ದೀರ್ಘ ಅವಧಿಯ ಸರಾಸರಿ ಮಳೆಯನ್ನು ಆಧರಿಸಿದೆ ಅಂದಾಜಿಸಲಾಗುತ್ತದೆ. 1961 ಮತ್ತು 2010 ರ ನಡುವೆ ಮುಂಗಾರು 88 ಸೆಂ.ಮೀ ಇದೆ.
ಪೆಸಿಫಿಕ್ ಹಾಗೂ ಹಿಂದೂ ಮಹಾಸಾಗರದ ಪ್ರಸ್ತುತ ತಾಪಮಾನವನ್ನು ಆಧರಿಸಿದೆ ಮುನ್ಸೂಚನೆ ನೀಡಲಾಗಿದೆ. ಈ ಎರಡು ಸಮುದ್ರಗಳ ತಾಪಮಾನ ಭಾರತೀಯ ಮುಂಗಾರಿನ ಮೇಲೆ ಪರಿಣಾಮ ಬೀರುತ್ತದೆ. ಆದರೆ ಐಎಂಡಿ ಮೇ ಅಂತ್ಯದ ವೇಳೆಗೆ ಮತ್ತೊಮ್ಮೆ ಮುಂಗಾರು ಮುನ್ಸೂಚನೆಯನ್ನು ನವೀಕರಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


