ಗುಜರಾತ್: 15 ದಿನದ ಹಸುಗೂಸು ಕೊರೋನಾಗೆ ಬಲಿ
ಗುಜರಾತಿನ ಸೂರತ್ ನಗರದ ಆಸ್ಪತ್ರೆಯೊಂದರಲ್ಲಿ ಕೋವಿಡ್-19 ಸೋಂಕಿತ ಮಹಿಳೆಗೆ ಜನಿಸಿದ 15 ದಿನದ ಹಸುಗೂಸು ಹೆಣ್ಣು ಮಗುವೊಂದು ಮೃತಪಟ್ಟಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಸೂರತ್: ಗುಜರಾತಿನ ಸೂರತ್ ನಗರದ ಆಸ್ಪತ್ರೆಯೊಂದರಲ್ಲಿ ಕೋವಿಡ್-19 ಸೋಂಕಿತ ಮಹಿಳೆಗೆ ಜನಿಸಿದ 15 ದಿನದ ಹಸುಗೂಸು ಹೆಣ್ಣು ಮಗುವೊಂದು ಮೃತಪಟ್ಟಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಏಪ್ರಿಲ್ 1 ರಂದು ಸೋಂಕಿನೊಂದಿಗೆ ಶಿಶು ಜನಿಸಿದ್ದು, ಆ ಮಗುವಿನ ತಾಯಿ ಕೂಡ ಸೋಂಕಿಗೆ ತುತ್ತಾಗಿದ್ದಾರೆ ಎಂದು ಡೈಮಂಡ್ ಆಸ್ಪತ್ರೆಯ ಟ್ರಸ್ಟಿ ದಿನೇಶ್ ನವಾಡಿಯಾ ಹೇಳಿದ್ದಾರೆ.
ಮಗುವಿನ ತಾಯಿಯನ್ನು ಬೇರೆೊಂದು ಆಸ್ಪತ್ರೆಗೆ ಸ್ಥಳಾಂತರಿಸಿದ್ದರೆ, ನವಜಾತ ಶಿಶುವಿನ ಸ್ಥಿತಿ ಕ್ಷೀಣಿಸಿದಾಗ ವೆಂಟಿಲೇಟರ್ ನಲ್ಲಿ ಇಡಲಾಗಿತ್ತು. ಆದರೆ, ಗುರುವಾರ ರಾತ್ರಿ ಆ ಮಗು ಕೊನೆಯುಸಿರೆಳೆಯಿತು ಎಂದು ಅವರು ತಿಳಿಸಿದ್ದಾರೆ.
ಕೋವಿಡ್-19 ಸೋಂಕಿನಿಂದ ಇತ್ತೀಚಿಗೆ ಚೇತರಿಸಿಕೊಂಡಿದ್ದ ಸೂರತ್ ಮಾಜಿ ಮೇಯರ್ ಡಾ. ಜಗದೀಶ್ ಪಾಟೀಲ್, ಶಿಶು ವಿನ ಚಿಕಿತ್ಸೆಗಾಗಿ ರಕ್ತದ ಫ್ಲಾಸ್ಮಾವನ್ನು ದಾನ ಮಾಡಿದ್ದರು. ನವ ಜಾತ ಶಿಶುವನ್ನು ಉಳಿಸಿಕೊಳ್ಳಲು ವೈದ್ಯರು ಸಾಕಷ್ಟು ಪ್ರಯತ್ನಿಸಿದರು, ಆದರೆ, ಆಗಲಿಲ್ಲ. ಎಂದು ಅವರು ತಿಳಿಸಿದ್ದಾರೆ.
ಸೂರತ್ ಗೆ ಹೊಂದಿಕೊಂಡಂತೆ ಇರುವ ತಾಪಿ ಜಿಲ್ಲೆಯ 14 ದಿನಗಳ ಬಾಲಕ ಶಿಶುವೊಂದು ಸೋಂಕಿನಿಂದಾಗಿ ಸೂರತ್ ನ ನೂತನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತಪಟ್ಟಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


