''ಸಂಪೂರ್ಣ ನಿಷ್ಪ್ರಯೋಜಕ'' ಅರ್ಜಿ: ಕುರಾನ್ ನಲ್ಲಿರುವ ಸಾಲುಗಳನ್ನು ತೆಗೆಯಲು ಕೋರಿದ್ದ ರಿಜ್ವಿಗೆ ದಂಡ ವಿಧಿಸಿದ ಕೋರ್ಟ್!
ಕುರಾನ್ ನಲ್ಲಿರುವ 26 ಸಾಲುಗಳನ್ನು ತೆಗೆಯಲು ನಿರ್ದೇಶನ ನೀಡಬೇಕೆಂದು ಉತ್ತರ ಪ್ರದೇಶ ಶಿಯಾ ವಕ್ಫ್ ಬೋರ್ಡ್ ನ ಮಾಜಿ ಅಧ್ಯಕ್ಷ ವಸೀಮ್ ರಿಜ್ವಿ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸಂಪೂರ್ಣ ನಿಷ್ಪ್ರಯೋಜಕ ಎಂದು ತಿರಸ್ಕರಿಸಿದೆ.

ನವದೆಹಲಿ: ಕುರಾನ್ ನಲ್ಲಿರುವ 26 ಸಾಲುಗಳನ್ನು ತೆಗೆಯಲು ನಿರ್ದೇಶನ ನೀಡಬೇಕೆಂದು ಉತ್ತರ ಪ್ರದೇಶ ಶಿಯಾ ವಕ್ಫ್ ಬೋರ್ಡ್ ನ ಮಾಜಿ ಅಧ್ಯಕ್ಷ ವಸೀಮ್ ರಿಜ್ವಿ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸಂಪೂರ್ಣ ನಿಷ್ಪ್ರಯೋಜಕ ಎಂದು ತಿರಸ್ಕರಿಸಿದೆ.
ನ್ಯಾ. ಆರ್ ಎಫ್ ನಾರಿಮನ್, ನ್ಯಾ.ಬಿಆರ್ ಗವಾಯಿ, ನ್ಯಾ. ಹೃಷಿಕೇಶ್ ರಾಯ್ ಅವರಿದ್ದ ಪೀಠ ಅರ್ಜಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕುರಾನ್ ನಲ್ಲಿ 26 ಸಾಲುಗಳು ಭಯೋತ್ಪಾದನೆಯನ್ನು ಉತ್ತೇಜಿಸುತ್ತವೆ ಆದ್ದರಿಂದ ಇದನ್ನು ತೆಗೆದುಹಾಕಲು ಸೂಚನೆ ನೀಡಬೇಕೆಂಬ ವಸೀಮ್ ರಿಜ್ವಿ ಅವರ ಮನವಿಯನ್ನು ತಿರಸ್ಕರಿಸುವುದಾಗಿ ಹೇಳಿದೆ. ಅಷ್ಟೇ ಅಲ್ಲದೇ ಅರ್ಜಿ ಸಂಪೂರ್ಣ ನಿಷ್ಪ್ರಯೋಜಕವಾಗಿದ್ದು, ಅರ್ಜಿದಾರರಿಗೆ 50 ಸಾವಿರ ರೂಪಾಯಿಗಳ ದಂಡ ವಿಧಿಸುತ್ತಿರುವುದಾಗಿಯೂ ಕೋರ್ಟ್ ಹೇಳಿದೆ.
"ನ್ಯಾಯ, ನೀತಿ, ಸಮಾನತೆ, ಕ್ಷಮೆ, ಸಹಿಷ್ಣುತೆಗಳು ಇಸ್ಲಾಮ್ ಗೆ ಆಧಾರವಾಗಿದೆ. ಆದರೆ ಕುರಾನ್ ನಲ್ಲಿರುವ ಸಾಲುಗಳ ಪೈಕಿ 26 ಸಾಲುಗಳನ್ನು ವಿಪರೀತವಾಗಿ ಅರ್ಥೈಸಲಾಗಿದ್ದು ಅದರ ಪರಿಣಾಮವಾಗಿ ಇಸ್ಲಾಮ್ ತನ್ನ ಮೂಲ ತತ್ವದಿಂದ ದೂರ ಹೋಗುತ್ತಿದೆ, ಆದ್ದರಿಂದ ವಿಪರೀತವಾಗಿ ಅರ್ಥೈಸಿರುವ ಸಾಲುಗಳನ್ನು ತೆಗೆದುಹಾಕಬೇಕು" ಎಂದು ರಿಜ್ವಿ ಅರ್ಜಿಯಲ್ಲಿ ಕೋರಿದ್ದರು
ರಿಜ್ವಿ ಅರ್ಜಿಗೆ ಹಲವು ಮುಸ್ಲಿಂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿ, ಇಸ್ಲಾಂ ಧಾರ್ಮಿಕ ಮುಖಂಡರು ಪ್ರತಿಭಟಿಸಿದ್ದರು. ಅಷ್ಟೇ ಅಲ್ಲದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಅಡಿಯಲ್ಲಿ ರಿಜ್ವಿ ವಿರುದ್ಧ ಬರೇಲಿಯಲ್ಲಿ ಎಫ್ಐಆರ್ ಕೂಡ ದಾಖಲಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


