ಶೋಪಿಯಾನ್ ಎನ್ ಕೌಂಟರ್: ಮೂವರು ಅಪರಿಚಿತ ಉಗ್ರರ ಹತ್ಯೆ, ಮುಂದುವರಿದ ಕಾರ್ಯಾಚರಣೆ
ಕಣಿವೆ ಪ್ರದೇಶ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಮತ್ತೆ ಎನ್ ಕೌಂಟರ್ ನಡೆದಿದೆ. ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಎನ್ ಕೌಂಟರ್ ನಲ್ಲಿ ಮೂರು ಅಪರಿಚಿತ ಭಯೋತ್ಪಾದಕರು ಹತ್ಯೆಯಾಗಿದ್ದಾರೆ.

ಜಮ್ಮು-ಕಾಶ್ಮೀರ: ಕಣಿವೆ ಪ್ರದೇಶ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಮತ್ತೆ ಎನ್ ಕೌಂಟರ್ ನಡೆದಿದೆ. ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಎನ್ ಕೌಂಟರ್ ನಲ್ಲಿ ಮೂರು ಅಪರಿಚಿತ ಭಯೋತ್ಪಾದಕರು ಹತ್ಯೆಯಾಗಿದ್ದಾರೆ.
ಶೋಪಿಯಾನ್ ಜಿಲ್ಲೆಯ ಹಡಿಪೊರದಲ್ಲಿ ಎನ್ ಕೌಂಟರ್ ಇನ್ನೂ ನಡೆಯುತ್ತಿದೆ. ಹೆಚ್ಚಿನ ವಿವರ ತಿಳಿದುಬಂದಿಲ್ಲ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.
ಉಗ್ರಗಾಮಿ ಸಂಘಟನೆಗೆ ಹೊಸದಾಗಿ ಸೇರಿದ ಯುವಕರನ್ನು ಎನ್ ಕೌಂಟರ್ ಆರಂಭದಲ್ಲಿ ಪ್ರಾಮಾಣಿಕವಾಗಿ ಶರಣಾಗುವಂತೆ ಪೊಲೀಸರು ಕೇಳಿಕೊಂಡರು. ಒಬ್ಬ ಉಗ್ರನ ಪೋಷಕರು ಕೂಡ ಮನವಿ ಮಾಡಿಕೊಂಡಿದ್ದರೂ ಆತ ಯಾರ ಮಾತನ್ನೂ ಕೇಳಲಿಲ್ಲ, ಬೇರೆ ಉಗ್ರರು ಆತನನ್ನು ಶರಣಾಗಲು ಬಿಡಲಿಲ್ಲ, ಹೀಗಾಗಿ ಪೊಲೀಸರು ಕೊಂದು ಹಾಕಿದರು ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


