ದೇಶ

ಸಂಸತ್ ಮುಂಗಾರು ಅಧಿವೇಶನ: ಮೊದಲ ದಿನವೇ 30 ಸಂಸದರಿಗೆ ಕೊರೋನಾ ಪಾಸಿಟಿವ್!

ಸಂಸತ್ ಮುಂಗಾರು ಅಧಿವೇಶನ ಆರಂಭವಾಗಿದ್ದು, ಇದಕ್ಕೂ ಮುನ್ನಾ ದಿನ ಸಂಸದರಿಗೆ ಕಡ್ಡಾಯವಾಗಿ ಕೊರೋನಾ ಪರೀಕ್ಷೆ ಮಾಡಿಸಲಾಗಿತ್ತು. ಆ ಪರೀಕ್ಷೆಯ ವರದಿ ಸೋಮವಾರ ಬಂದಿದ್ದು, ಸುಮಾರು 30 ಸಂಸದರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಸಂಸತ್ ಮುಂಗಾರು ಅಧಿವೇಶನ: ಮೊದಲ ದಿನವೇ 30 ಸಂಸದರಿಗೆ ಕೊರೋನಾ ಪಾಸಿಟಿವ್!
ಲೋಕಸಭೆ
Published On :

ನವದೆಹಲಿ: ಸಂಸತ್ ಮುಂಗಾರು ಅಧಿವೇಶನ ಆರಂಭವಾಗಿದ್ದು, ಇದಕ್ಕೂ ಮುನ್ನಾ ದಿನ ಸಂಸದರಿಗೆ ಕಡ್ಡಾಯವಾಗಿ ಕೊರೋನಾ ಪರೀಕ್ಷೆ ಮಾಡಿಸಲಾಗಿತ್ತು. ಆ ಪರೀಕ್ಷೆಯ ವರದಿ ಸೋಮವಾರ ಬಂದಿದ್ದು, ಸುಮಾರು 30 ಸಂಸದರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಸೆಪ್ಟೆಂಬರ್ 13ರಂದು ಸಂಸದರಿಗೆ ಹಾಗೂ ಸಂಸತ್ ಭವನದ ಸಿಬ್ಬಂದಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 30 ಸಂಸದರಿಗೆ ಹಾಗೂ 50ಕ್ಕೂ ಹೆಚ್ಚು ಸಂಸತ್ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿದೆ. 

ಬಿಜೆಪಿ 12 ಸಂಸದರು, ವೈಎಸ್ಆರ್ ಕಾಂಗ್ರೆಸ್ ನ 2, ಶಿವಸೇನೆ, ಡಿಎಂಕೆ ಮತ್ತು ಆರ್ಎಲ್ಪಿ ಪಕ್ಷದ ತಲಾ ಒಬ್ಬರು ಸೇರಿದಂತೆ ಒಟ್ಟು 30 ಸಂಸದರಿಗೆ ಕೊರೋನಾ ದೃಢಪಟ್ಟಿದೆ. 

ಈ ಪೈಕಿ ಕೊರೋನಾಗೆ ತುತ್ತಾಗಿರುವ ಬಿಜೆಪಿಯ ಸಂಸದ ಸುಕಾಂತ್ ಮಜೂಂದಾರ್ ತಮಗೆ ಕೊರೋನಾ ಪಾಸಿಟಿವ್ ಬಂದಿರುವುದನ್ನು ಟ್ವೀಟ್ ಮೂಲಕ ತಿಳಿಸಿದ್ದಾರೆ. ಇನ್ನು ಸಂಸದ ಅನಂತ್ ಕುಮಾರ್ ಹೆಗಡೆ ಮತ್ತು ಮೀನಾಕ್ಷಿ ಲೇಕಿಗೂ ಕೊರೋನಾ ವಕ್ಕರಿಸಿದೆ.

ಇದಕ್ಕೂ ಮುನ್ನ ಅಮಿತಾ ಶಾ ಸೇರಿದಂತೆ ಏಳು ಕೇಂದ್ರ ಸಚಿವರು ಮತ್ತು 25 ಸಂಸದರು ಕೊರೋನಾಗೆ ತುತ್ತಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.