ಭಾರತದ 4 ಲ್ಯಾಬ್‌ಗಳಿಂದ ಪಡೆದ ಕೋವಿಡ್ ನೆಗಟಿವ್ ವರದಿಗಳನ್ನು ತಿರಸ್ಕರಿಸಿ: ಏರ್ ಇಂಡಿಯಾ ಎಕ್ಸ್‌ಪ್ರೆಸ್ ಗೆ ದುಬೈ ಸೂಚನೆ
ನಾಲ್ಕು ಭಾರತೀಯ ಪ್ರಯೋಗಾಲಯಗಳಿಂದ ಪ್ರಯಾಣಿಕರ ಪಡೆದ ಕೋವಿಡ್-19 ನೆಗಟಿವ್ ಪರೀಕ್ಷಾ ವರದಿಗಳನ್ನು ತಿರಸ್ಕರಿಸಬೇಕು ಎಂದು ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರ(ಡಿಸಿಎಎ) ಸೋಮವಾರ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ಗೆ ಸೂಚಿಸಿದೆ.

ನವದೆಹಲಿ: ನಾಲ್ಕು ಭಾರತೀಯ ಪ್ರಯೋಗಾಲಯಗಳಿಂದ ಪ್ರಯಾಣಿಕರ ಪಡೆದ ಕೋವಿಡ್-19 ನೆಗಟಿವ್ ಪರೀಕ್ಷಾ ವರದಿಗಳನ್ನು ತಿರಸ್ಕರಿಸಬೇಕು ಎಂದು ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರ(ಡಿಸಿಎಎ) ಸೋಮವಾರ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ಗೆ ಸೂಚಿಸಿದೆ.
ಜೈಪುರದ ಸೂರ್ಯ ಲ್ಯಾಬ್, ಕೇರಳದ ಮೈಕ್ರೋಹೆಲ್ತ್ ಲ್ಯಾಬ್, ಡಾ.ಪಿ.ಭಾಸಿನ್ ಪಾಥ್‌ಲ್ಯಾಬ್ಸ್(ಖಾಸಗಿ) ಲಿಮಿಟೆಡ್ ಮತ್ತು ದೆಹಲಿಯ ನೋಬಲ್ ಡಯಾಗ್ನೋಸ್ಟಿಕ್ ಸೆಂಟರ್ ನೀಡುವ ಕೋವಿಡ್-19 ವರದಿಗಳನ್ನು ತಿರಸ್ಕರಿಸಬೇಕು ಎಂದು ವಿಮಾನಯಾನ ಸಂಸ್ಥೆ ಟ್ವಿಟರ್‌ನಲ್ಲಿ ತಿಳಿಸಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯ ನಿಯಮಗಳ ಪ್ರಕಾರ, ಭಾರತದಿಂದ ಪ್ರಯಾಣಿಸುವ ಪ್ರಯಾಣಿಕರು ಪ್ರಯಾಣಕ್ಕೂ 96 ಗಂಟೆಗಳ ಮೊದಲು ಮಾಡಿದ ಆರ್ ಟಿ-ಪಿಸಿಆರ್ ನಿಂದ ಪಡೆದ ಕೋವಿಡ್ ನೆಗಟಿವ್ ಮೂಲ ಪ್ರಮಾಣಪತ್ರಗಳನ್ನು ಸಲ್ಲಿಸಬೇಕು.
ಆಗಸ್ಟ್ 18 ಮತ್ತು ಸೆಪ್ಟೆಂಬರ್ 4 ರಂದು ಕೋವಿಡ್-19 ಪಾಸಿಟಿವ್ ಪ್ರಮಾಣಪತ್ರಗಳೊಂದಿಗೆ ಇಬ್ಬರು ಪ್ರಯಾಣಿಕರನ್ನು ಕರೆತಂದಿದ್ದಕ್ಕಾಗಿ ಸೆಪ್ಟೆಂಬರ್ 18 ರಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳನ್ನು ಡಿಸಿಎಎ 24 ಗಂಟೆಗಳ ಕಾಲ ಸ್ಥಗಿತಗೊಳಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


