ಡ್ರಗ್ಸ್ ಕೇಸ್: ಎನ್'ಸಿಬಿ ಮುಂದೆ ವಿಚಾರಣೆಗೆ ನಟಿ ದೀಪಿಕಾ ಪಡುಕೋಣೆ ಹಾಜರು
ಮಾದಕ ವಸ್ತು ಸೇವನೆ ಪ್ರಕರಣ ಸಂಬಂಧ ಬಾಲಿವುಡ್'ನ ಖ್ಯಾತ ನಟಿ ದೀಪಿಕಾ ಪಡುಕೋಣೆಯವರು ಶನಿವಾರ ಮಾದಕ ವಸ್ತು ನಿಯಂತ್ರಣ ದಳ (ಎನ್'ಸಿಬಿ) ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

ಮುಂಬೈ: ಮಾದಕ ವಸ್ತು ಸೇವನೆ ಪ್ರಕರಣ ಸಂಬಂಧ ಬಾಲಿವುಡ್'ನ ಖ್ಯಾತ ನಟಿ ದೀಪಿಕಾ ಪಡುಕೋಣೆಯವರು ಶನಿವಾರ ಮಾದಕ ವಸ್ತು ನಿಯಂತ್ರಣ ದಳ (ಎನ್'ಸಿಬಿ) ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಡ್ರಗ್ಸ್ ಪ್ರಕರಣ ಸಂಬಂಧ ದೀಪಿಕಾ ಪಡುಕೋಣೆಯವರಿಗೆ ಶುಕ್ರವಾರ ಹಾಜರಾಗಲು ಎನ್'ಸಿಬಿ ಸೂಚನೆ ನೀಡಿತ್ತು. ಆದರೆ, ಶನಿವಾರ ವಿಚಾರಣೆಗೆ ಹಾಜರಾಗುವುದಾಗಿ ದೀಪಿಕಾ ತಿಳಿಸಿದ್ದರು. ಇದರಂತೆ ಇಂದು ದೀಪಿಕಾ ಅವರು ವಿಚಾರಣೆಗೆ ಹಾಜರಾಗಿದ್ದಾರೆ.
ಬಾಲಿವುಡ್'ನ ದೀಪಿಕಾ ಪಡುಕೋಣೆಯವರು ಡ್ರಗ್ಸ್'ಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದ ವಾಟ್ಸ್'ಆಪ್ ಗ್ರೂಪ್'ಗೆ ದೀಪಿಕಾ ಅವರೇ ಆಡ್ಮಿನ್ ಆಗಿದ್ದರು ಎಂದು ಹೇಳಲಾಗುತ್ತಿದೆ. ಕ್ವಾನ್ ಕಂಪನಿಯಲ್ಲಿ ಟ್ಯಾಲೆಟ್ ಮ್ಯಾನೇಜರ್ ಆಗಿರುವ ಜಯಾ ಸಹಾ ಎಂಬಾಕೆ ಈ ಗ್ರೂಪ್ ಮಾಡಿದ್ದು, ಅದರಲ್ಲಿ ದೀಪಿಕಾ ಅವರ ಮ್ಯಾನೇಜರ್ ಆಗಿರುವ ಕರೀಷ್ಮಾ ಪ್ರಕಾಶ್ ಅವರೂ ಕೂಡ ಆಡ್ಮಿನ್ ಆಗಿದ್ದರು ಎಂದು ಹೇಳಲಾಗುತ್ತಿದೆ.
ಈ ಗ್ರೂಪ್'ಗೆ ಡಿಪಿ ಕೆಎ ಕ್ವಾನ್ ಎಂಬ ಹೆಸರಿಡಲಾಗಿತ್ತು, ಡಿಪಿ ಎಂದರೆ ದೀಪಿಕಾ ಪಡುಕೋಣೆ, ಕೆಎ ಎಂದರೆ ಕರೀಷ್ಮಾ, ಕ್ವಾನ್ ಎಂದರೆ ಕ್ವಾನ್ ಕಂಪನಿಯಾಗಿದೆ ಎಂದು ಖಾಸಗಿ ಟಿವಿಯೊಂದು ವರದಿ ಮಾಡಿದೆ.
ಈ ಗ್ರೂಪ್ ನಲ್ಲಿ 2017ರಲ್ಲಿ ನಡೆದಿರುವ ಚಾಟ್ ವೊಂದರಲ್ಲಿ ದೀಪಿಕಾ ಮಾಲ್'ಗೆ ಬೇಡಿಕೆ ಇಡುವ, ಗಾಂಜಾ ಬೇಡ ಹಶೀಸ್ ಬೇಕು ಎಂದು ಕೇಳುವ ಚಾಟ್ ಬಹಿರಂಗವಾಗಿದೆ. ಹೀಗಾಗಿ ದೀಪಿಕಾ ಅವರಿಗೆ ಎನ್'ಸಿಬಿ ಸಮನ್ಸ್ ಜಾರಿಗೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


