ದೇಶ

ಬಿಹಾರ: ಎಸ್ ಪಿ ಕಚೇರಿಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಯುವತಿ!

ಮದುವೆಯಾಗುವ ನೆಪದಲ್ಲಿ ಯುವಕನೊಬ್ಬನಿಂದ ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ವಯಸ್ಸಿನ ಯುವತಿಯೊಬ್ಬಳು ನ್ಯಾಯ ಕೇಳಲು ಹೋಗಿ ಕಿಶಾನ್ ಗಂಜ್ ಎಸ್ ಪಿ ಕಚೇರಿಯ ಹೊರಗಡೆ ಹೆಣ್ಣುಮಗುವಿಗೆ ಗುರುವಾರ ಸಂಜೆ ಜನ್ಮ ನೀಡಿದ್ದಾಳೆ.

ಬಿಹಾರ: ಎಸ್ ಪಿ ಕಚೇರಿಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಯುವತಿ!
ಸಾಂದರ್ಭಿಕ ಚಿತ್ರ
Published On :

ಪಾಟ್ನಾ: ಮದುವೆಯಾಗುವ ನೆಪದಲ್ಲಿ ಯುವಕನೊಬ್ಬನಿಂದ ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ವಯಸ್ಸಿನ ಯುವತಿಯೊಬ್ಬಳು ನ್ಯಾಯ ಕೇಳಲು ಹೋಗಿ ಕಿಶಾನ್ ಗಂಜ್ ಎಸ್ ಪಿ ಕಚೇರಿಯ ಹೊರಗಡೆ ಹೆಣ್ಣುಮಗುವಿಗೆ ಗುರುವಾರ ಸಂಜೆ ಜನ್ಮ ನೀಡಿದ್ದಾಳೆ.

ಪಹಾದಕಟ್ಟಾ ಪೊಲೀಸ್ ಠಾಣೆ ವ್ಯಾಪ್ತಿಯ ನೆರೆಯ ಹಳ್ಳಿಯ ಮುನ್ನಾ ಕುಮಾರ್ ಎಂಬ ಯುವಕ, ಪ್ರೀತಿಯ ನೆಪದಲ್ಲಿ ಈಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದು, ಆಕೆ ಗರ್ಭೀಣಿ  ಅಂತಾ ತಿಳಿದಾಗ ಮದುವೆಯಾಗಲು ನಿರಾಕರಿಸಿದ್ದಾನೆ.

ನಂತರ, ಸಂತ್ರಸ್ತೆ ಈ ವಿಚಾರವನ್ನು ಕುಟುಂಬಕ್ಕೆ ತಿಳಿಸಿದ್ದಾಳೆ. ಆದರೆ, ಆಕೆಯ ತಂದೆ ಆರೋಪಿಯ ಮನೆಗೆ ಹೋಗಿ ಘಟನೆ ಬಗ್ಗೆ ವಿವರಿಸಿದಾಗ ಆರೋಪಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ನಂತರ ನಾಲ್ಕು ಬಾರಿ ರಾಜಿ ಪಂಚಾಯಿತಿ ನಡೆದು ನ್ಯಾಯ ಪಡೆಯಲು ಆಕೆಯ ಕುಟುಂಬಸ್ಥರು ಪ್ರಯತ್ನಿಸಿದ್ದಾರೆ. ಆದರೆ, ಅಲ್ಲೂ ಕೂಡಾ ನ್ಯಾಯ ದೊರೆಯದೇ ಇದ್ದಾಗ ತಮ್ಮ ಕಚೇರಿಗೆ ಬಂದಿದ್ದಾಗಿ ಎಸ್ ಪಿ ಕುಮಾರ್ ಅಶಿಶ್ ಹೇಳಿದ್ದಾರೆ.

ಕಚೇರಿಯಲ್ಲಿಯೇ ಹೆರಿಗೆ ಆದ ಬಳಿಕ ಅಶಿಶ್ ಅಂಬ್ಯುಲೆನ್ಸ್ ಕರೆಸಿ ಹತ್ತಿರದ ಸಾದರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೇ ಆಸ್ಪತ್ರೆಯಲ್ಲಿ ಆಕೆಯ ರಕ್ಷಣೆಗಾಗಿ ಇಬ್ಬರು ಮಹಿಳಾ ಪೊಲೀಸರನ್ನು ನಿಯೋಜಿಸಿದ್ದಾರೆ.

ದೂರು ದಾಖಲಾಗುತ್ತಿದ್ದಂತೆ ಆರೋಪಿ ತಲೆ ಮರೆಸಿಕೊಂಡಿದ್ದು, ಈ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ ರಚಿಸಲಾಗುವುದು, ಸದ್ಯ ತಾಯಿ ಮತ್ತು ಮಗು ಆರೋಗ್ಯದಿಂದ ಇರುವುದಾಗಿ ಎಸ್ ಪಿ ಕುಮಾರ್ ಅಶಿಶ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.