ಸುಶಾಂತ್ ಪ್ರಕರಣದ ಖ್ಯಾತಿಯ ಬಿಹಾರ ಡಿಜಿಪಿ ಗುಪ್ತೇಶ್ವರ್ ಪಾಂಡೆ ಸ್ವಯಂ ನಿವೃತ್ತಿ: ಚುನಾವಣೆಗೆ ಸ್ಪರ್ಧೆ?
ಸುಶಾಂತ್ ಸಿಂಗ್ ರಜ್ಪೂತ್ ಪ್ರಕರಣದ ಖ್ಯಾತಿಯ ಬಿಹಾರ ಡಿಜಿಪಿ ಗುಪ್ತೇಶ್ವರ್ ಪಾಂಡೇ ಸ್ವಯಂ ನಿವೃತ್ತಿ ಪಡೆದಿದ್ದಾರೆ.

ಪಾಟ್ನಾ: ಸುಶಾಂತ್ ಸಿಂಗ್ ರಜ್ಪೂತ್ ಪ್ರಕರಣದ ಖ್ಯಾತಿಯ ಬಿಹಾರ ಡಿಜಿಪಿ ಗುಪ್ತೇಶ್ವರ್ ಪಾಂಡೇ ಸ್ವಯಂ ನಿವೃತ್ತಿ ಪಡೆದಿದ್ದಾರೆ.
ಬಿಹಾರ ರಾಜ್ಯಪಾಲರು ಗುಪ್ತೇಶ್ವರ್ ಪಾಂಡೆ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
ಅಕ್ಟೋಬರ್-ನವೆಂಬರ್ ವೇಳೆಯಲ್ಲಿ ಬಿಹಾರ ವಿಧಾನಸಭಾ ಚುನಾವಣೆ ಇರುವಾಗ ಗುಪ್ತೇಶ್ವರ್ ಪಾಂಡೇ ಅವರ ಸ್ವಯಂ ನಿವೃತ್ತಿ ಕುತೂಹಲ ಮೂಡಿಸಿದೆ. 2014 ರಲ್ಲಿಯೂ ಸ್ವಯಂ ನಿವೃತ್ತಿಗೆ ಮನವಿ ಮಾಡಿದ್ದ ಪಾಂಡೇ ಬಿಜೆಪಿ ಟಿಕೆಟ್ ನಿಂದ ಚುನಾವಣೆಗೆ ಸ್ಪರ್ಧಿಸುವ ವದಂತಿ ಇತ್ತು. ಆದರೆ ಸ್ವಯಂ ನಿವೃತ್ತಿಗೆ ಮನವಿ ಮಾಡಿದ್ದ 9 ತಿಂಗಳೊಳಗಾಗಿ ರಾಜೀನಾಮೆ ಹಿಂಪಡೆದು ಪುನಃ ಸೇವೆಗೆ ಮರಳಲು ಮನವಿ ಸಲ್ಲಿಸಿದ್ದರು. ಬಿಹಾರ ಸರ್ಕಾರ ಇವರ ಮನವಿಯನ್ನು ಒಪ್ಪಿ ಪುನಃ ಸೇವೆಗೆ ಮರಳಲು ಅವಕಾಶ ನೀಡಿತ್ತು.
1987 ಬ್ಯಾಚ್ ನ ಐಪಿಎಸ್ ಅಧಿಕಾರಿ, ಬಿಹಾರ ಕೇಡರ್ ನ ಅಧಿಕಾರಿಯಾಗಿರುವ ಗುಪ್ತೇಶ್ವರ್ ಪಾಂಡೆ, ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಸುದ್ದಿಯಲ್ಲಿದ್ದರು. ಬಿಹಾರದ ಅಧಿಕಾರಿಯನ್ನು ಕ್ವಾರಂಟೈನ್ ಗೆ ಕಳಿಸಿದ್ದ ಮುಂಬೈ ಪೊಲೀಸರ ಕ್ರಮವನ್ನು ನೇರಾ ನೇರವಾಗಿ ಟೀಕಿಸಿದ್ದಷ್ಟೇ ಅಲ್ಲದೇ ರಿಯಾ ಚಕ್ರವರ್ತಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬಗ್ಗೆ ಮಾತನಾಡುವಷ್ಟು ಉನ್ನತ ಸ್ಥಾನ ಹೊಂದಿಲ್ಲ ಎಂದೂ ಹೇಳಿ ವಿವಾದಕ್ಕೆ ಗುರಿಯಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


