ಐಎಎಫ್ ನ ರಾಫೆಲ್ ಗೆ ಶೀಘ್ರವೇ ಮಹಿಳಾ ಪೈಲಟ್ ನೇಮಕ
ಇತ್ತೀಚೆಗಷ್ಟೇ ಭಾರತೀಯ ವಾಯುಪಡೆ ಸೇರ್ಪಡೆಯಾಗಿರುವ ರಾಫೆಲ್ ಯುದ್ಧವಿಮಾನವನ್ನು ಮುನ್ನಡೆಸಲು ಮಹಿಳಾ ಪೈಲಟ್ ನ್ನು ಶೀಘ್ರವೇ ನೇಮಕ ಮಾಡಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ನವದೆಹಲಿ: ಇತ್ತೀಚೆಗಷ್ಟೇ ಭಾರತೀಯ ವಾಯುಪಡೆ ಸೇರ್ಪಡೆಯಾಗಿರುವ ರಾಫೆಲ್ ಯುದ್ಧವಿಮಾನವನ್ನು ಮುನ್ನಡೆಸಲು ಮಹಿಳಾ ಪೈಲಟ್ ನ್ನು ಶೀಘ್ರವೇ ನೇಮಕ ಮಾಡಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ರಾಫೆಲ್ ನ್ನು ಮುನ್ನಡೆಸಲು ಆ ಮಹಿಳಾ ಪೈಲಟ್ ಗೆ ಈಗಾಗಲೇ ತರಬೇತಿ ನೀಡಲಾಗುತ್ತಿದೆ ಎಂಬ ಮಾಹಿತಿಯನ್ನೂ ಐಎಎಫ್ ನ ಹಿರಿಯ ಅಧಿಕಾರಿ ಬಹಿರಂಗಪಡಿಸಿದ್ದಾರೆ.
ಆ ಮಹಿಳಾ ಪೈಲಟ್ ಈಗ ಮಿಗ್-21 ಫೈಟರ್ ಗಳನ್ನು ಮುನ್ನಡೆಸುತ್ತಿದ್ದು ಆಂತರಿಕ ಪ್ರಕ್ರಿಯೆಯಲ್ಲಿ ಅವರು ರಾಫೆಲ್ ಯುದ್ಧವಿಮಾನವನ್ನು ಚಾಲನೆ ಮಾಡುವುದಕ್ಕೆ ಆಯ್ಕೆಯಾಗಿದ್ದಾರೆ.
ಪ್ರಸ್ತುತ ಐಎಎಫ್ ನಲ್ಲಿ 10 ಮಹಿಳಾ ಫೈಟರ್ ಜೆಟ್ ಫೈಲಟ್ ಗಳು ಹಾಗೂ 18 ಮಹಿಳಾ ನ್ಯಾವಿಗೇಟರ್ ಗಳಿದ್ದಾರೆ. ಐಎಎಫ್ ನಲ್ಲಿ ಒಟ್ಟು 1,875 ಮಹಿಳಾ ಅಧಿಕಾರಿಗಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


