ರಾಷ್ಟ್ರಪತಿ ಕೊವಿಂದ್ ಅವರಿಗೆ ಸಿಂಗಾಪುರ ರಾಯಭಾರಿಯಿಂದ ‘ವಿಶ್ವಾಸಾರ್ಹ ಪತ್ರ’ ಅರ್ಪಣೆ
ಭಾರತದಲ್ಲಿರುವ ಸಿಂಗಾಪುರ ರಾಯಭಾರಿ ಸೈಮನ್ ವಾಂಗ್ ವೈ ಕುಯೆನ್ ಅವರು ಗುರುವಾರ ತಮ್ಮ ‘ವಿಶ್ವಾಸಾರ್ಹ ಪತ್ರ’ವನ್ನು ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರಿಗೆ ವರ್ಚ್ಯುಯಲ್ ಸಮಾರಂಭದಲ್ಲಿ ಅರ್ಪಿಸಿದರು.

ನವದೆಹಲಿ: ಭಾರತದಲ್ಲಿರುವ ಸಿಂಗಾಪುರ ರಾಯಭಾರಿ ಸೈಮನ್ ವಾಂಗ್ ವೈ ಕುಯೆನ್ ಅವರು ಗುರುವಾರ ತಮ್ಮ ‘ವಿಶ್ವಾಸಾರ್ಹ ಪತ್ರ’ವನ್ನು ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರಿಗೆ ವರ್ಚ್ಯುಯಲ್ ಸಮಾರಂಭದಲ್ಲಿ ಅರ್ಪಿಸಿದರು.
ವಿಶ್ವಾಸಾರ್ಹ ಪತ್ರವನ್ನು ಸ್ವೀಕರಿಸಿದ ಕೋವಿಂದ್ ಅವರು, ಇತ್ತೀಚೆಗೆ ಸಾರ್ವತ್ರಿಕ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ಸಿಂಗಾಪುರ ಸರ್ಕಾರವನ್ನು ಅಭಿನಂದಿಸಿದ್ದಾರೆ. ಭಾರತ ಮತ್ತು ಸಿಂಗಾಪುರ ನಡುವಿನ ದ್ವಿಪಕ್ಷೀಯ ಸಂಬಂಧಗಳು ಸದೃಢವಾಗಿವೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿ ಸೇರಿದಂತೆ ಪ್ರಮುಖ ವೇದಿಕೆಗಳಲ್ಲಿ ಭಾರತಕ್ಕೆ ನೀಡಿದ ದೃಢ ಬೆಂಬಲಕ್ಕಾಗಿ ರಾಷ್ಟ್ರಪತಿ ಸಿಂಗಾಪುರಕ್ಕೆ ಧನ್ಯವಾದ ಅರ್ಪಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಪರಸ್ಪರ ಸಹಕಾರ, ಎರಡೂ ದೇಶಗಳ ನಡುವೆ ಅಸ್ತಿತ್ವದಲ್ಲಿರುವ ಸ್ನೇಹ ಮತ್ತು ವಿಶ್ವಾಸದ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಿದೆ ಎಂದು ರಾಷ್ಟ್ರಪತಿ ಈ ಸಂದರ್ಭದಲ್ಲಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


