ಸುನಂದಾ ಪುಷ್ಕರ್ ಪ್ರಕರಣ: ಸಂಯಮದಿಂದ ವರ್ತಿಸುವಂತೆ ಅರ್ನಾಬ್ ಗೆ ದೆಹಲಿ ಹೈಕೋರ್ಟ್ ಸಲಹೆ
ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಸಾವಿನ ಪ್ರಕರಣದಲ್ಲಿ ಸಮಾನಾಂತರ ವಿಚಾರಣೆ ಹಾಗೂ ತನಿಖೆ ನಡೆಸಿದ್ದಕ್ಕಾಗ ಅರ್ನಾಬ್ ಗೋಸ್ವಾಮಿಯನ್ನು ದೆಹಲಿ ಹೈಕೋರ್ಟ್ ಪ್ರಶ್ನಿಸಿದೆ. ಅಲ್ಲದೆ ಈ ವಿಷಯವನ್ನು ಚರ್ಚಿಸುವ ವೇಳೆ ವಾಕ್ಚಾತುರ್ಯವನ್ನು ಬಳಸದೆ ಸಂಯಮವನ್ನು ತೋರಿಸಿ ಎಂದು ಹೇಳಿದೆ.

ನವದೆಹಲಿ: ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಸಾವಿನ ಪ್ರಕರಣದಲ್ಲಿ ಸಮಾನಾಂತರ ವಿಚಾರಣೆ ಹಾಗೂ ತನಿಖೆ ನಡೆಸಿದ್ದಕ್ಕಾಗ ಅರ್ನಾಬ್ ಗೋಸ್ವಾಮಿಯನ್ನು ದೆಹಲಿ ಹೈಕೋರ್ಟ್ ಪ್ರಶ್ನಿಸಿದೆ. ಅಲ್ಲದೆ ಈ ವಿಷಯವನ್ನು ಚರ್ಚಿಸುವ ವೇಳೆ ವಾಕ್ಚಾತುರ್ಯವನ್ನು ಬಳಸದೆ ಸಂಯಮವನ್ನು ತೋರಿಸಿ ಎಂದು ಹೇಳಿದೆ.
ನ್ಯಾಯಮೂರ್ತಿ ಮುಕ್ತಾ ಗುಪ್ತಾ "ಯಾರೂ ಮಾದ್ಯಮವನ್ನು ಟೀಕಿಸುತ್ತಾರೆ ಎಂದು ಬಾವಿಸಬಾರದು, ಆದರೆ ಅದೇ ಸಮಯದಲ್ಲಿ, ತನಿಖೆಯ ಪಾವಿತ್ರ್ಯವನ್ನು ಕಾಪಾಡಿಕೊಳ್ಳಬೇಕು "ಎಂದು ಹೇಳಿದರು.
"ದಯವಿಟ್ಟು ಸಂಯಮವನ್ನು ತೋರಿಸಿ. ಒಮ್ಮೆ ಕ್ರಿಮಿನಲ್ ಪ್ರಕರಣದಲ್ಲಿ ಪೊಲೀಸ್ ತನಿಖೆ ನಡೆಯುತ್ತಿದ್ದರೆ, ಮಾಧ್ಯಮಗಳು ಸಮಾನಾಂತರವಾಗಿ ತನಿಖೆ ನಡೆಸಲು ಸಾಧ್ಯವಿಲ್ಲ" ಎಂದು ನ್ಯಾಯಾಧೀಶರು ಹೇಳಿದರು. ಅಲ್ಲದೆ ಸಾರ್ವಜನಿಕರು ಕ್ರಿಮಿನಲ್ ಪ್ರಕರಣದ ವಿಚಾರವನ್ನು ಮೊದಲು ಕೋರ್ಟ್ ವಿಚಾರಣೆಯನ್ನು ಗಮನಿಸಿ ಅರಿಯಬೇಕು. ನಂತರ ಮಾದ್ಯಮಗಳತ್ತ ನೋಡಬೇಕು ಎಂದಿದ್ದಾರೆ.
ಹೈಕೋರ್ಟ್ ಡಿಸೆಂಬರ್ 1, 2017 ರ ಆದೇಶವನ್ನು ಉಲ್ಲೇಖಿಸಿ"ಮಾದ್ಯಮವು ಯಾರನ್ನೂ ಅಪರಾಧಿ ಮಾಡಲು ಸಾಧ್ಯವಿಲ್ಲ" ಅಥವಾ ಅವನು / ಅವಳು ತಪ್ಪಿತಸ್ಥನೆಂದು ಹೇಳಲು ಅಥವಾ ಯಾವುದೇ ಆಧಾರರಹಿತ ತೀರ್ಪು ನೀಡಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಮಾದ್ಯಮಗಳು ವಿಷಯಗಳ ಬಗ್ಗೆ ವರದಿ ಮಾಡುವಾಗ ಕಾಳಜಿ ಮತ್ತು ಎಚ್ಚರಿಕೆಯಿಂದಿರಬೇಕು. ಈ ಪ್ರಕರಣದ ತನಿಖೆ ಅಥವಾ ವಿಚಾರಣೆ ಬಾಕಿ ಇದೆ. " ಎಂದಿದೆ.
ಇದೇ ವೇಳೆ , "ಪ್ರತಿವಾದಿಗಳು (ಗೋಸ್ವಾಮಿ ಮತ್ತು ಅವರ ಚಾನೆಲ್) ಮುಂದಿನ ವಿಚಾರಣೆಯ ದಿನಾಂಕದವರೆಗೆ ಅವರ ಪರವಾಗಿ ಅವರ ಸಲಹೆಯ ಮೂಲಕ ನೀಡಿದ ಹೇಳಿಕೆಗೆ ಬದ್ಧರಾಗಿರಲು ನಿರ್ದೇಶಿಸಲಾಗಿದೆ" ಎಂದು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


