ಸಂಜಯ್ ರಾವತ್ ಶಿವಸೇನೆಯ ಮುಖ್ತ ವಕ್ತಾರರಾಗಿ ನೇಮಕ
ಶಿವಸೇನೆಯ ಹಿರಿಯ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಅವರನ್ನು ಪಕ್ಷದ ಮುಖ್ಯ ವಕ್ತಾರರಾಗಿ ನೇಮಕ ಮಾಡುವ ಮೂಲಕ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ.

ಮುಂಬೈ: ಶಿವಸೇನೆಯ ಹಿರಿಯ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಅವರನ್ನು ಪಕ್ಷದ ಮುಖ್ಯ ವಕ್ತಾರರಾಗಿ ನೇಮಕ ಮಾಡುವ ಮೂಲಕ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ.
2014ರಲ್ಲಿ ಸಂಜಯ್ ರಾವತ್ ಮತ್ತಿತರನ್ನು ಕೈ ಬಿಟ್ಟು ಹೊಸಬರಿಗೆ ಮಣೆ ಹಾಕಲಾಗಿತ್ತು. ಆದಾಗ್ಯೂ, ವಿಧಾನಸಭಾ ಚುನಾವಣೆ ನಂತರ ಉಂಟಾಗಿದ್ದ ಬಿಕ್ಕಟ್ಟು, ಸೇನಾ, ಎನ್ ಸಿಪಿ ಮತ್ತು ಕಾಂಗ್ರೆಸ್ ನನ್ನು ಒಟ್ಟಿಗೆ ಸೇರಿಸಿ ಮಹಾ ವಿಕಾಸ್ ಆಘಾಡಿ ಸರ್ಕಾರವನ್ನು
ಅಸ್ತಿತ್ವಕ್ಕೆ ತರುವಲ್ಲಿ ಸಂಜಯ್ ರಾವತ್ ಮಹತ್ವದ ಪಾತ್ರ ವಹಿಸಿದ್ದರು.ರಾವತ್ ಶಿವಸೇನೆ ಮುಖವಾಣಿ ಸಾಮ್ನಾದ ಕಾರ್ಯಕಾರಿ ಸಂಪಾದಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಮಾಜಿ ಕೇಂದ್ರ ಸಚಿವ, ಹಾಲಿ ಸಂಸದ ಅರವಿಂದ್ ಸಾವಂತ್, ಎಂಪಿ ಪ್ರಿಯಾಂಕ ಚತುರ್ವೇದಿ, ನೀಲಮ್ ಗೊರೆ ಸೇರಿದಂತೆ ಮತ್ತಿತರ 10 ಮಂದಿಯನ್ನು ಅಧಿಕೃತ ವಕ್ತಾರರನ್ನಾಗಿ ನೇಮಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


