ಅಹಮದಾಬಾದನ್ನು ಮಿನಿ ಪಾಕಿಸ್ತಾನಕ್ಕೆ ಹೋಲಿಸಿರುವ ಸಂಜಯ್ ರಾವತ್ ಗುಜರಾತೀಯರ ಕ್ಷಮೆ ಕೇಳಬೇಕು:ಬಿಜೆಪಿ
ಸಂಜಯ್ ರಾವತ್-ಕಂಗನಾ ರಾನಾವತ್ ಆರೋಪ-ಪ್ರತ್ಯಾರೋಪ ರಾಜಕೀಯ ನಾಯಕರ ಮಟ್ಟಿಗೆ ಹೋಗಿದೆ. ಅಹಮದಾಬಾದನ್ನು ಮಿನಿ ಪಾಕಿಸ್ತಾನ ಎಂದು ಕರೆದಿರುವ ಶಿವಸೇನಾ ಸಂಸದ ಸಂಜಯ್ ರಾವತ್ ಗುಜರಾತ್ ರಾಜ್ಯದ ಹೆಸರಿಗೆ ಕಳಂಕ ತರಲು ಹೊರಟಿದ್ದಾರೆ, ಹೀಗಾಗಿ ಗುಜರಾತಿಗರ ಕ್ಷಮೆಯನ್ನು ಅವರು ಕೇಳಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ಅಹಮದಾಬಾದ್: ಸಂಜಯ್ ರಾವತ್-ಕಂಗನಾ ರಾನಾವತ್ ಆರೋಪ-ಪ್ರತ್ಯಾರೋಪ ರಾಜಕೀಯ ನಾಯಕರ ಮಟ್ಟಿಗೆ ಹೋಗಿದೆ. ಅಹಮದಾಬಾದನ್ನು ಮಿನಿ ಪಾಕಿಸ್ತಾನ ಎಂದು ಕರೆದಿರುವ ಶಿವಸೇನಾ ಸಂಸದ ಸಂಜಯ್ ರಾವತ್ ಗುಜರಾತ್ ರಾಜ್ಯದ ಹೆಸರಿಗೆ ಕಳಂಕ ತರಲು ಹೊರಟಿದ್ದಾರೆ, ಹೀಗಾಗಿ ಗುಜರಾತಿಗರ ಕ್ಷಮೆಯನ್ನು ಅವರು ಕೇಳಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ನಿನ್ನೆ ಮುಂಬೈಯಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಸಂಸದ ಸಂಜಯ್ ರಾವತ್, ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರ ಎಂದು ಹೋಲಿಸುವ ಬಾಲಿವುಡ್ ನಟಿ ಕಂಗನಾ ರಾನಾವತ್ ಅವರಿಗೆ ಅಹಮದಾಬಾದನ್ನು ಮಿನಿ ಪಾಕಿಸ್ತಾನ ಎಂದು ಕರೆಯಲು ಧೈರ್ಯವಿದೆಯೇ ಎಂದು ಕೇಳಿದ್ದರು. ಮುಂಬೈ ನಗರ ಅಸುರಕ್ಷಿತವಾಗಿದೆ ಎಂದು ಕಂಗನಾ ಆರೋಪಿಸಿದ ನಂತರ ಅವರು ಮತ್ತು ಸಂಜಯ್ ರಾವತ್ ಪರಸ್ಪರ ಮಾತಿನ ಕೆಸರೆರಚಾಟದಲ್ಲಿ ತೊಡಗಿದ್ದಾರೆ.
ಸಂಜಯ್ ರಾವತ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಗುಜರಾತ್ ಬಿಜೆಪಿ ವಕ್ತಾರ ಭರತ್ ಪಾಂಡ್ಯ, ಅಹಮದಾಬಾದನ್ನು ಮಿನಿ ಪಾಕಿಸ್ತಾನ ಎಂದು ಕರೆದು ಶಿವಸೇನಾ ನಾಯಕ ಸಂಜಯ್ ರಾವತ್ ರಾಜ್ಯಕ್ಕೆ, ರಾಜ್ಯದ ಜನತೆಗೆ ಅವಮಾನ ಮಾಡಿದ್ದಾರೆ. ಅವರು ಗುಜರಾತೀಯರು ಮತ್ತು ಅಹಮದಾಬಾದೀಯರ ಕ್ಷಮೆ ಕೇಳಬೇಕು ಎಂದಿದ್ದಾರೆ.
ಗುಜರಾತ್ ಗಾಂಧಿ, ಸರ್ದಾರ್ ಪಟೇಲ್ ರಂಥವರು ಹುಟ್ಟಿದ ನಾಡು. ಭಾರತವನ್ನು ಐಕ್ಯತೆ ಮತ್ತು ಏಕತೆಯ ಮೂಲಕ ಗಟ್ಟಿಗೊಳಿಸಿದವರು ಪಟೇಲರು. ಅವರಿಂದಾಗಿಯೇ ಜುನಾಗಡ್ ಮತ್ತು ಹೈದರಾಬಾದ್ ಪಾಕಿಸ್ತಾನ ಪಾಲಾಗುವುದು ತಪ್ಪಿಹೋಗಿ ಭಾರತದಲ್ಲಿಯೇ ಉಳಿದುಕೊಂಡಿತು, ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಬೇಕು ಎಂಬುದು ಅವರ ಕನಸಾಗಿತ್ತು, ಸಂವಿಧಾನ ವಿಧಿ 370ನ್ನು ತೆಗೆದುಹಾಕಿ ಅದನ್ನು ಪ್ರಧಾನಿ ಮೋದಿ ಈಡೇರಿಸಿದ್ದಾರೆ. ಹೀಗಾಗಿ ಭಾರತದ ಸಮಗ್ರತೆ, ಐಕ್ಯತೆಗೆ ಗುಜರಾತ್ ನ ಕಾಣಿಕೆ ಸಾಕಷ್ಟಿದೆ. ಅದನ್ನು ಯಾವತ್ತಿಗೂ ಮರೆಯಬಾರದು ಎಂದು ಭರತ್ ಪಾಂಡ್ಯ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


