ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ ಪ್ರಪಂಚದ ಅತ್ಯುನ್ನತ ಚಿಂತಕಿ: ಬ್ರಿಟಿಷ್ ಮ್ಯಾಗ್ ಜೀನ್ ಪ್ರಾಸ್ಪೆಕ್ಟ್
ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ನಿರ್ವಹಣೆಯಲ್ಲಿ ಕೇರಳವು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಫೂರ್ತಿಯಾಗಿ ಮುಂದುವರೆದಿದೆ. ಬ್ರಿಟಿಷ್ ನಿಯತ ಕಾಲಿಕ ಪ್ರಾಸ್ಪೆಕ್ಟ್, ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರನ್ನು ವಿಶ್ವದ ಅತಿ ಉನ್ನತ ಚಿಂತಕಿ ಎಂದು ಆಯ್ಕೆ ಮಾಡಿದೆ.

ತಿರುವನಂತಪುರ: ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ನಿರ್ವಹಣೆಯಲ್ಲಿ ಕೇರಳವು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಫೂರ್ತಿಯಾಗಿ ಮುಂದುವರೆದಿದೆ. ಬ್ರಿಟಿಷ್ ನಿಯತ ಕಾಲಿಕ ಪ್ರಾಸ್ಪೆಕ್ಟ್, ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರನ್ನು ವಿಶ್ವದ ಅತಿ ಉನ್ನತ ಚಿಂತಕಿ ಎಂದು ಆಯ್ಕೆ ಮಾಡಿದೆ.
ನ್ಯೂಜಿಲೆಂಡ್‌ನ ಪ್ರಧಾನ ಮಂತ್ರಿ ಜಸಿಂಡಾ ಅರ್ಡೆರ್ನ್ ಸೇರಿದಂತೆ 50 ವ್ಯಕ್ತಿಗಳ ಪಟ್ಟಿಯಲ್ಲಿ ಶೈಲಜಾ ಅವರನ್ನು ಆಯ್ಕೆ ಮಾಡಲಾಗಿದೆ, ತತ್ವಜ್ಞಾನಿ ಕಾರ್ನೆಲ್ ವೆಸ್ಟ್, ಇತಿಹಾಸಕಾರ ಆಲಿವೆಟ್ ಒಟೆಲ್ ಇತರರು ಈ ಪಟ್ಟಿಯಲ್ಲಿದ್ದಾರೆ. ಪ್ರಾಸ್ಪೆಕ್ಟ್ ಮ್ಯಾಗಜೀನ್ ಪ್ರಕಾರ 'ಸರಿಯಾದ ಸ್ಥಳದಲ್ಲಿರುವ ಸರಿಯಾದ ಮಹಿಳೆ( ರೈಟ್ ವುಮೆನ್ ಇನ್ ರೈಟ್ ಪ್ಲೇಸ್) ಎಂದು
ಹೇಳಿದೆ.
ಜನವರಿಯಲ್ಲಿ ಕೋವಿಡ್ -19 ಇನ್ನೂ ಚೀನಾದ ಕಥೆಯಾಗಿದ್ದಾಗ, ನಿಖರವಾಗಿ ಕೊರೋನಾ ಆಗಮನವನ್ನು ಗಮನಿಸಿ ಅದರಿಂದ ಉಂಟಾಗುವ ಪರಿಣಾಮಗಳ ಮುನ್ಸೂಚನೆ ನೀಡಿದ್ದರು ಎಂದು ಮ್ಯಾಗಜೀನ್ ತಿಳಿಸಿದೆ.
ಕೊರೋನಾ ನಿರ್ವಹಣೆಯಲ್ಲಿ ಕೇರಳ ವಹಿಸಿದ ಪಾತ್ರದ ಹಾಗೂ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಬಿಬಿಸಿ, ದಿ ನ್ಯೂಯಾರ್ಕ್ ಟೈಮ್ಸ್, ದಿ ಗಾರ್ಡಿಯನ್ ಮತ್ತಿತರ ಅಂತರಾಷ್ಟ್ರೀಯ ಮಾಧ್ಯಮಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


