ಅನೈತಿಕ ಸಂಬಂಧ: ನೂರಾರು ಜನರ ಮುಂದೆ ಕಾಪ್ ಪಂಚಾಯ್ತಿಯಿಂದ ಯುವ ದಂಪತಿಯ ನಗ್ನ ಸ್ನಾನ!
ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ಯುವ ದಂಪತಿಯನ್ನು ಬಂಧಿಸಿ ನೂರಾರು ಜನರ ಸಮ್ಮುಖದಲ್ಲಿ ಕಾಪ್ ಪಂಚಾಯ್ತಿ ಬೆತ್ತಲೆಯಾಗಿ ಸ್ನಾನ ಮಾಡಿಸಿದೆ.

ಜೈಪುರ: ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ಯುವ ದಂಪತಿಯನ್ನು ಬಂಧಿಸಿ ನೂರಾರು ಜನರ ಸಮ್ಮುಖದಲ್ಲಿ ಕಾಪ್ ಪಂಚಾಯ್ತಿ ಬೆತ್ತಲೆಯಾಗಿ ಸ್ನಾನ ಮಾಡಿಸಿದೆ.
ವಾಸ್ತವ ಕಾಪ್ ಪಂಚಾಯ್ತಿಯ ಪಂಚ-ಪಟೇಲರು ಯುವ ದಂಪತಿಯನ್ನು ‘ಶುದ್ಧೀಕರಿಸುವ’ ಸಲುವಾಗಿ ಈ ಅಮಾನವೀಯ ಶಿಕ್ಷೆಯನ್ನು ವಿಧಿಸಿದ್ದಾರೆ. ಇದೇ ವೇಳೆ ಅವರಿಗೆ 53,000 ರೂ. ದಂಡವನ್ನು ವಿಧಿಸಿದೆ.
‘ಅಕ್ರಮ ಸಂಬಂಧದ ಪಾಪಕ್ಕೆ ಪ್ರಾಯಶ್ಚಿತ್ತ’ ಎಂದು ಆಗಸ್ಟ್ 21ರಂದು ನೂರಾರು ಜನರು ಮುಂದೆ ದಂಪತಿಯಿಂದ ನಗ್ನ ಸ್ನಾನ ಮಾಡಿಸಲಾಗಿದೆ ಎಂಬುದು ತಡವಾಗಿ ವರದಿಯಾಗಿದೆ. ಸಾನ್ಸಿ ಅಭಿವೃದ್ಧಿ ಮಂಡಳಿಯ ಕೆಲವು ಸದಸ್ಯರು ಸಿಕಾರ್ ಜಿಲ್ಲಾ ಪೊಲೀಸ್ ಆಡಳಿತಕ್ಕೆ ಜ್ಞಾಪಕ ಪತ್ರ ಸಲ್ಲಿಸಿದಾಗ ಈ ವಿಷಯ ಬೆಳಕಿಗೆ ಬಂದಿತು.
ಈ ದಂಪತಿಗಳು ಸಿಕಾರ್‌ನ ಸೋಲಾ ಗ್ರಾಮಕ್ಕೆ ಸೇರಿದವರಾಗಿದ್ದು, ಒಬ್ಬರಿಗೊಬ್ಬರು ಚಿಕ್ಕಮ್ಮ ಮತ್ತು ಸೋದರಳಿಯರಾಗಿ ಸಂಬಂಧ ಹೊಂದಿದ್ದಾರೆಂದು ಆರೋಪಿಸಲಾಗಿದೆ. ಕೆಲವು ವಾರಗಳ ಹಿಂದೆ, ದಂಪತಿಗಳ ಆಕ್ಷೇಪಾರ್ಹ ವೀಡಿಯೊವನ್ನು ರಹಸ್ಯವಾಗಿ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಡಲಾಗಿತ್ತು ನಂತರ ವಿಡಿಯೋ ವೈರಲ್ ಆಗಿತ್ತು.
ಈ ಸಂಬಂಧ ಆಗಸ್ಟ್ 21ರಂದು, ಗ್ರಾಮ ಜಾತಿ ಮಂಡಳಿಯ ಸದಸ್ಯರು ಪುರುಷನ ಕುಟುಂಬ ರೂ. 31,000 ಮತ್ತು ಮಹಿಳೆಯ ಕಡೆಯವರಿಗೆ 22,000 ರೂ. ದಂಡವನ್ನು ವಿಧಿಸಿದ್ದು ಹಣ ಜಮಾ ಮಾಡಿದ ನಂತರ ನಗ್ನ ಸ್ನಾನ ಮಾಡಿಸಲಾಗಿದೆ. ಇನ್ನು ದಂಡದ ಹಣವನ್ನು ಕಾಪ್ ಸದಸ್ಯರು ಹಂಚಿಕೊಂಡರು.
ಸಾನ್ಸಿ ಅಭಿವೃದ್ಧಿ ಮಂಡಳಿ ನೀಡಿದ ದೂರಿನ ಆಧಾರದ ಮೇಲೆ ಸಿಕಾರ್ ಪೊಲೀಸರು ಈಗ 9 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸಿಕಾರ್ ಎಸ್ ಪಿ ದೇವೇಂದ್ರ ಶರ್ಮಾ ಅವರ ಪ್ರಕಾರ, 'ಅವರ ಕುಟುಂಬಗಳ ಒಪ್ಪಿಗೆಯೊಂದಿಗೆ ಯುವ ದಂಪತಿಗೆ ನಗ್ನವಾಗಿ ಸ್ನಾನ ಮಾಡಿಸಲಾಗಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


