ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಕರ್ನಾಟಕ, ತೆಲಂಗಾಣ, ರಾಜಸ್ತಾನಗಳಲ್ಲಿ ಹೆಚ್ಚು: ಪ.ಬಂಗಾಳದಲ್ಲಿ ಅತಿ ಕಡಿಮೆ
ವಾರ್ಷಿಕ ಶೈಕ್ಷಣಿಕ ವರದಿ ಸ್ಥಿತಿಗತಿ(ಎಎಸ್ಇಆರ್) ಪ್ರಕಾರ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಗಳ ಪೈಕಿ ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದೆ. ಪಶ್ಚಿಮ ಬಂಗಾಳದ ಪ್ರಮಾಣ ಈ ವರ್ಷ ಶೇಕಡಾ 1.5ರಷ್ಟಿದ್ದು 2018ರಲ್ಲಿ ಅದು ಶೇಕಡಾ 3.3ರಷ್ಟಿತ್ತು ಎಂದು ವರದಿ ಹೇಳುತ್ತದೆ.

ಕೋಲ್ಕತ್ತಾ: ವಾರ್ಷಿಕ ಶೈಕ್ಷಣಿಕ ವರದಿ ಸ್ಥಿತಿಗತಿ(ಎಎಸ್ಇಆರ್) ಪ್ರಕಾರ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಗಳ ಪೈಕಿ ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದೆ. ಪಶ್ಚಿಮ ಬಂಗಾಳದ ಪ್ರಮಾಣ ಈ ವರ್ಷ ಶೇಕಡಾ 1.5ರಷ್ಟಿದ್ದು 2018ರಲ್ಲಿ ಅದು ಶೇಕಡಾ 3.3ರಷ್ಟಿತ್ತು ಎಂದು ವರದಿ ಹೇಳುತ್ತದೆ.
ರಾಷ್ಟ್ರಮಟ್ಟದಲ್ಲಿ, ಅದು ಈ ವರ್ಷ ಶೇಕಡಾ 5.5ರಿಂದ ಶೇಕಡಾ 4ಕ್ಕೆ ಹೋಗಿದೆ. ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ಪೂರೈಕೆಯಲ್ಲಿ ಕೂಡ ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದೆ. ದೇಶದ 16 ಸಾವಿರದ 974 ಗ್ರಾಮಗಳಲ್ಲಿರುವ 52,227 ಕುಟುಂಬಗಳಲ್ಲಿ ನಡೆಸಿರುವ ಸಮೀಕ್ಷೆಯಿಂದ ಇದು ತಿಳಿದುಬಂದಿದೆ. ಈ ಎಎಸ್ಇಆರ್ ವರದಿಯನ್ನು ಪ್ರಥಮ್ ಎಜುಕೇಶನ್ ಫೌಂಡೇಶನ್ ತಯಾರಿಸಿದೆ.
ಪ್ರಥಮ್ ದೇಶದ ಪ್ರಮುಖ ಸರ್ಕಾರೇತರ ಸಂಘಟನೆಯಾಗಿದ್ದು ನಿರ್ಗತಿಕ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಪೂರೈಸುವಲ್ಲಿ ನಿರತವಾಗಿದೆ. ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಯಲ್ಲಿ ಕರ್ನಾಟಕ, ತೆಲಂಗಾಣ ಮತ್ತು ರಾಜಸ್ತಾನ ಮುಂಚೂಣಿಯಲ್ಲಿದೆ. ಪಠ್ಯಪುಸ್ತಕ ಪೂರೈಕೆಯಲ್ಲಿ ಸಹ ಪಶ್ಚಿಮ ಬಂಗಾಳ ಆಂಧ್ರ ಪ್ರದೇಶ, ರಾಜಸ್ತಾನ ಮತ್ತು ತೆಲಂಗಾಣಗಳಿಗಿಂತ ಮುಂಚೂಣಿಯಲ್ಲಿದೆ ಎಂದು ತಿಳಿದುಬಂದಿದೆ.
ಪಶ್ಚಿಮ ಬಂಗಾಳದ ಯಶಸ್ಸಿನ ಹಿಂದಿನ ಪ್ರಮುಖ ಅಂಶವೆಂದರೆ ನಿರಂತರ ಮಧ್ಯಾಹ್ನ ಬಿಸಿಯೂಟದ ವ್ಯವಸ್ಥೆ. "ಲಾಕ್ ಡೌನ್ ಅವಧಿಯಲ್ಲಿ ಸಹ, ಬಿಸಿಯೂಟಕ್ಕೆ ಬಳಸುವ ಆಹಾರ ಧಾನ್ಯಗಳನ್ನು ವಿದ್ಯಾರ್ಥಿಗಳ ಕುಟುಂಬಗಳಿಗೆ ಒದಗಿಸಲಾಗುತ್ತಿತ್ತು. ಇದಲ್ಲದೆ, ರಾಜ್ಯ ಸರ್ಕಾರವು ಶೂಗಳು, ಶಾಲಾ ಚೀಲಗಳು, ದೀನದಲಿತ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಒದಗಿಸಿತು. 15ರಿಂದ 16 ವರ್ಷದೊಳಗಿನ ಶಾಲೆಯಿಂದ ಹೊರಗುಳಿದ ಮಕ್ಕಳ ಪ್ರಮಾಣವು ಶೇಕಡಾ 50ಕ್ಕಿಂತ ಕಡಿಮೆಗೆ ಕುಸಿಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


