ಕೇಂದ್ರದ ವಿರುದ್ಧ 'ಹಲ್ಲು ಕಚ್ಚಿ, ನಿಮ್ಮ ಮುಷ್ಟಿ ಎತ್ತಿ': ರೈತರಿಗೆ ತೆಲಂಗಾಣ ಸಿಎಂ ಕೆಸಿಆರ್ ಕರೆ
ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ರೈತರ ಬಗ್ಗೆ ಯಾವುದೇ ಪ್ರೀತಿ ಇಲ್ಲ ಎಂದು ವಾಗ್ದಾಳಿ ನಡೆಸಿದ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು, ಕೇಂದ್ರದ ವಿರುದ್ಧ ರೈತರು ಹಲ್ಲು ಕಚ್ಚಿ, ಮುಷ್ಟಿ ಎತ್ತಿ ಹೋರಾಡಬೇಕು ಎಂದು ಶನಿವಾರ ಕರೆ ನೀಡಿದರು.

ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ರೈತರ ಬಗ್ಗೆ ಯಾವುದೇ ಪ್ರೀತಿ ಇಲ್ಲ ಎಂದು ವಾಗ್ದಾಳಿ ನಡೆಸಿದ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು, ಕೇಂದ್ರದ ವಿರುದ್ಧ ರೈತರು ಹಲ್ಲು ಕಚ್ಚಿ, ಮುಷ್ಟಿ ಎತ್ತಿ ಹೋರಾಡಬೇಕು ಎಂದು ಶನಿವಾರ ಕರೆ ನೀಡಿದರು.
ಭಾರತದ ಆಹಾರ ನಿಗಮ(ಎಫ್‌ಸಿಐ), ಭತ್ತದ ರೈತರಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ಗಿಂತ ಹೆಚ್ಚಿನ ಮೊತ್ತವನ್ನು ಪಾವತಿಸಲು ರಾಜ್ಯ ಸರ್ಕಾರಗಳಿಗೆ ಅವಕಾಶ ನೀಡದ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ತೆಲಂಗಾಣ ರೈತರು ಹೋರಾಟ ನಡೆಸಬೇಕು ಎಂದು ಕೆಸಿಆರ್ ಹೇಳಿದರು.
ಇಂದು ಜಂಗಾಂವ್ ಜಿಲ್ಲೆಯ ಕೊಡಕಂಡ್ಲದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಚಂದ್ರಶೇಖರ್ ರಾವ್ ಅವರು, ಭತ್ತವನ್ನು ಕ್ವಿಂಟಲ್‌ಗೆ 1,888 ರೂ.ಗೆ ಖರೀದಿಸಬೇಕು ಎಂದು ಎಫ್‌ಸಿಐ ಅತ್ಯಂತ ಸ್ಪಷ್ಟವಾಗಿ ಹೇಳಿದೆ. ಕೇಂದ್ರ ಸರ್ಕಾರಕ್ಕೆ ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಮೋದಿ ಸರ್ಕಾರದ ವಿರುದ್ಧ ರೈತರು ಹಲ್ಲು ಕಚ್ಚಿ, ಮುಷ್ಟಿ ಎತ್ತಿ ಹೋರಾಟ ನಡೆಸಬೇಕು ಎಂದರು.
"1,888 ರೂ.ಗಿಂತ ಒಂದು ರೂಪಾಯಿ ಸಹ ಹೆಚ್ಚು ಪಾವತಿಸಬಾರದು ಎಂದು ರಾಜ್ಯ ಸರ್ಕಾರಗಳಿಗೆ ಎಫ್‌ಸಿಐ ಷರತ್ತು ವಿಧಿಸಿದೆ. ರಾಜ್ಯ ಸರ್ಕಾರಗಳು ಹೆಚ್ಚುವರಿ ಮೊತ್ತವನ್ನು ಪಾವತಿಸಿದರೆ, ಎಫ್‌ಸಿಐ ಅಂತಹ ಭತ್ತವನ್ನು ತೆಗೆದುಕೊಳ್ಳುವುದಿಲ್ಲ. ಎಫ್‌ಸಿಐ ಇಂತಹ ಆದೇಶಗಳನ್ನು ಹೊರಡಿಸಿದೆ" ಎಂದು ಮುಖ್ಯಮಂತ್ರಿ ಸಾರ್ವಜನಿಕ ಸಭೆಯಲ್ಲಿ ಎಫ್‌ಸಿಐನ ಆದೇಶದ ಪ್ರತಿಯನ್ನು ತೋರಿಸಿ, ಆಕ್ರೋಶ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


