ಚುನಾವಣಾ ಪ್ರಚಾರದ ವೇಳೆ ವೇದಿಕೆ ಕುಸಿತ: ಪಪ್ಪು ಯಾದವ್ ಗೆ ಬಲಗೈ ಮುರಿತ
ಜನ ಅಧಿಕಾರಿ ಪಕ್ಷದ(ಜೆಎಪಿ) ಸ್ಥಾಪಕರಲ್ಲೊಬ್ಬರಾದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಅವರು ಜಿಲ್ಲೆಯ ಮೀನಾಪುರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ವೇದಿಕೆಯಿಂದ ಕುಸಿದುಬಿದ್ದು, ಬಲಗೈ ಮುರಿತವಾಗಿದೆ.

ಮುಜಾಫರ್ ಪುರ್: ಜನ ಅಧಿಕಾರಿ ಪಕ್ಷದ(ಜೆಎಪಿ) ಸ್ಥಾಪಕರಲ್ಲೊಬ್ಬರಾದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಅವರು ಜಿಲ್ಲೆಯ ಮೀನಾಪುರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ವೇದಿಕೆಯಿಂದ ಕುಸಿದುಬಿದ್ದು, ಬಲಗೈ ಮುರಿತವಾಗಿದೆ.
ಪಪ್ಪು ಯಾದವ್ ಅವರು ಮಿನಾಪುರ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ವೇದಿಕೆ ಇದ್ದಕ್ಕಿದ್ದಂತೆ ಕುಸಿದಿದೆ. ವೇದಿಕೆಯಲ್ಲಿ ಅಧಿಕ ಸಂಖ್ಯೆಯ ಕಾರ್ಯಕರ್ತರು ಇದ್ದದ್ದರಿಂದ ದುರಂತ ಸಂಭವಿಸಿದೆ. ಘಟನೆಯಲ್ಲಿ ತಮ್ಮ ಬಲಗೈ ಮುರಿತಗೊಂಡಿದೆ ಎಂದು ಯಾದವ್ ತಾವಾಗಿಯೇ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಘಟನೆ ನಡೆದಿರುವುದಕ್ಕೆ ಯಾದವ್ ಆಡಳಿತವನ್ನು ದೂಷಿಸಿದ್ದಾರೆ. ತಮ್ಮ ಭಾಷಣ ಕೇಳಲು ಸಭಿಕರಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿಲ್ಲ ಎಂದು ಅವರು ದೂರಿದ್ದಾರೆ. ಸದ್ಯದ ಆಡಳಿತದಿಂದ ಜನರು ಬೇಸರಗೊಂಡಿದ್ದು, ನಿತೀಶ್ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಲು ಜನರು ಮನಸ್ಸು ಮಾಡಿದ್ದಾರೆ ಎಂದು ಪಪ್ಪು ಯಾದವ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


