ಒಮರ್ ಅಬ್ದುಲ್ಲಾ ನೇತೃತ್ವದ ಪೀಪಲ್ಸ್ ಅಲೈಯನ್ಸ್ ನಿಯೋಗ ಕಾರ್ಗಿಲ್‌ಗೆ ಭೇಟಿ
ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ನೇತೃತ್ವದ ‘ಗುಪ್ಕಾರ್ ನಿರ್ಣಯಕ್ಕಾಗಿ ಜನರ ಮೈತ್ರಿ’ (ಪೀಪಲ್ಸ್ ಅಲಯೆನ್ಸ್) ನಿಯೋಗ ಶುಕ್ರವಾರ ಮುಂಜಾನೆ ಕೇಂದ್ರಾಡಳಿತ ಪ್ರದೇಶದ ಲಡಾಖ್‌ನ ಗಡಿ ಪಟ್ಟಣವಾದ ಕಾರ್ಗಿಲ್‌ಗೆ ತೆರಳಿದೆ.

ಶ್ರೀನಗರ: ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ನೇತೃತ್ವದ ‘ಗುಪ್ಕಾರ್ ನಿರ್ಣಯಕ್ಕಾಗಿ ಜನರ ಮೈತ್ರಿ’ (ಪೀಪಲ್ಸ್ ಅಲಯೆನ್ಸ್) ನಿಯೋಗ ಶುಕ್ರವಾರ ಮುಂಜಾನೆ ಕೇಂದ್ರಾಡಳಿತ ಪ್ರದೇಶದ ಲಡಾಖ್‌ನ ಗಡಿ ಪಟ್ಟಣವಾದ ಕಾರ್ಗಿಲ್‌ಗೆ ತೆರಳಿದೆ.
ಕಳೆದ ಆಗಸ್ಟ್ 5 ರಂದು 370 ಮತ್ತು 35 ಎ ನೇ ವಿಧಿಗಳನ್ನು ರದ್ದುಗೊಳಿಸಿದ ನಂತರ ಕಾರ್ಗಿಲ್ ಗೆ ಭೇಟಿ ನೀಡುತ್ತಿರುವ ಕಾಶ್ಮೀರದ ಮುಖ್ಯವಾಹಿನಿಯ ರಾಜಕೀಯ ನಾಯಕರ ನಿಯೋಗ ಇದಾಗಿದೆ. ಕಾರ್ಗಿಲ್‍ನಲ್ಲಿ ಜನರು ಹಿಂದಿನ ರಾಜ್ಯವನ್ನು ವಿಭಜನೆಗೆ ವಿರೋಧಿಸಿದ್ದಾರೆ. ರಾಜ್ಯವನ್ನು ಪುನರ್ ಸ್ಥಾಪನೆಗೆ ಒತ್ತಾಯಿಸಿದ್ದಾರೆ. ಅಲ್ಲದೆ, ಲಡಾಖ್ ಕೇಂದ್ರಾಡಳಿತ ಪ್ರದೇಶದ ಬದಲಿಗೆ ಜಮ್ಮು-ಕಾಶ್ಮೀರದ ಭಾಗವಾಗಿರಲು ಇಚ್ಛಿಸಿದ್ದಾರೆ.
ನಿಯೋಗ ಶುಕ್ರವಾರ ಮುಂಜಾನೆ ಬೇಸಿಗೆ ರಾಜಧಾನಿ ಶ್ರೀನಗರದಿಂದ ಹೊರಟು ಕಾರ್ಗಿಲ್‌ಗೆ ತೆರಳಿದೆ ಎಂದು ಮೂಲಗಳು ತಿಳಿಸಿವೆ. ನಿಯೋಗದ ಸದಸ್ಯರನ್ನು ಬರಮಾಡಿಕೊಳ್ಳಲು ಹೆಚ್ಚಿನ ಸಂಖ್ಯೆಯ ರಾಜಕೀಯ ಮುಖಂಡರು ಮತ್ತು ಕಾರ್ಯಕರ್ತರು ದ್ರಾಸ್‌ಗೆ ಧಾವಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


