ದೇಶ

ಆಂಧ್ರ ಪ್ರದೇಶ: ಈಜಲು ಹೋಗಿದ್ದ ಆರು ಮಂದಿ ನೀರುಪಾಲು, ನಾಲ್ವರ ಶವ ಪತ್ತೆ!

ಈಜಲು ಹೋಗಿದ್ದ ಆರು ಮಂದಿ ಬಾಲಕರು ನೀರುಪಾಲಾಗಿದ್ದು, ಈ ಪೈಕಿ ನಾಲ್ಕು ಮಂದಿಯ ಶವ ಪತ್ತೆಯಾಗಿರುವ ಘಟನೆ ನೆರೆಯ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.

ಆಂಧ್ರ ಪ್ರದೇಶ: ಈಜಲು ಹೋಗಿದ್ದ ಆರು ಮಂದಿ ನೀರುಪಾಲು, ನಾಲ್ವರ ಶವ ಪತ್ತೆ!
ನೀರು ಪಾಲು
Published On :

ಪಶ್ಚಿಮ ಗೋದಾವರಿ: ಈಜಲು ಹೋಗಿದ್ದ ಆರು ಮಂದಿ ಬಾಲಕರು ನೀರುಪಾಲಾಗಿದ್ದು, ಈ ಪೈಕಿ ನಾಲ್ಕು ಮಂದಿಯ ಶವ ಪತ್ತೆಯಾಗಿರುವ ಘಟನೆ ನೆರೆಯ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.

ಪಶ್ಚಿಮ ಗೋದಾವರಿ ಜಿಲ್ಲೆಯ ವೇಲೈರುಪಾಡು ಮಂಡಲದ ವಸಂತವಾಡ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬುಧವಾರ ಈಜಲು ಹೋಗಿದ್ದ ಆರು ಬಾಲಕರು ಹೊಳೆಯಲ್ಲಿ ನೀರುಪಾಲಾಗಿದ್ದಾರೆ.

ಭೂದೇವಿಪೇಟ ಗ್ರಾಮಸ್ಥರ ಗುಂಪೊಂದು ವಿಹಾರಕ್ಕಾಗಿ ಹೊಳೆಗೆ ಹೋಗಿತ್ತು. ಭಾರೀ ಮಳೆಯಿಂದ ತುಂಬಿದ್ದ ಹೊಳೆಗೆ ಈಜಾಡಲು ಈ ಆರು ಹುಡುಗರು ಇಳಿದಿದ್ದಾರೆ. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಆರು ಮಂದಿ ಬಾಲಕರು ಮುಳುಗಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆಯೇ ಪೊಲೀಸರು ಮತ್ತು ಅಗ್ನಿಶಾಮಕ ದಳ  ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ನಾಲ್ಕು ಬಾಲಕರ ಶವ ಪತ್ತೆಯಾಗಿದೆ. ಬಾಲಕರಾದ ಶ್ರೀರಾಮುಲು ಶಿವಾಜಿ (16), ಗಂಗಾಧರ್ ವೆಂಕಟ ರಾವ್ (16), ಕುನವರಂ ರಾಧಾ ಕೃಷ್ಣ (15) ಮತ್ತು ಕರ್ನಾತಿ ರಂಜಿತ್ (15) ಮೃತದೇಹಗಳನ್ನು ಈವರೆಗೆ ಹೊಳೆಯಿಂದ ಹೊರತೆಗೆಯಲಾಗಿದೆ. ಇನ್ನಿಬ್ಬರು ಬಾಲಕರ  ಮೃತದೇಹಗಳ ಪತ್ತೆಗೆ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.