ಪ್ರೀತಿಸಿ 2 ತಿಂಗಳ ಹಿಂದೆ ಮದುವೆಯಾಗಿದ್ದ ಪತ್ನಿಯನ್ನು ನಾಯಿ ಚೈನಿನಿಂದ ಕತ್ತು ಹಿಸುಕಿ ಕೊಂದ ಪತಿ, ಇಂತಹ ಕಾರಣಕ್ಕೂ ಕೊಲೆ ಮಾಡ್ತಾರಾ?
ಪೋಷಕರ ಒಪ್ಪಿಗೆಯ ನಂತರ ಪ್ರೀತಿಸಿದ್ದ ಯುವತಿಯನ್ನೇ 2 ತಿಂಗಳ ಹಿಂದೆ ಮದುವೆಯಾಗಿದ್ದ ಯುವಕ ಇದೀಗ ಆಕೆಯನ್ನು ನಾಯಿ ಚೈನಿನಿಂದ ಕತ್ತು ಹಿಸುಕಿ ಕೊಲೆ ಮಾಡಿ, ಶವದ ಮುಂದೆ ಕುಳಿತು ರೋಧಿಸಿದ್ದಾನೆ.

ಭೋಪಾಲ್: ಪೋಷಕರ ಒಪ್ಪಿಗೆಯ ನಂತರ ಪ್ರೀತಿಸಿದ್ದ ಯುವತಿಯನ್ನೇ 2 ತಿಂಗಳ ಹಿಂದೆ ಮದುವೆಯಾಗಿದ್ದ ಯುವಕ ಇದೀಗ ಆಕೆಯನ್ನು ನಾಯಿ ಚೈನಿನಿಂದ ಕತ್ತು ಹಿಸುಕಿ ಕೊಲೆ ಮಾಡಿ, ಶವದ ಮುಂದೆ ಕುಳಿತು ರೋಧಿಸಿದ್ದಾನೆ.
ಮೊದಲಿಗೆ ನಾಯಿ ಚೈನಿನಿಂದ ಕತ್ತು ಹಿಸುಕಿ ಕೊಂದ ಬಳಿಕ ಚೂರಿಯಿಂದ ಮನಸೋ ಇಚ್ಛೆ ಇರಿದಿದ್ದಾನೆ. ಇನ್ನು ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿಯ ಪಕ್ಕ ಕೆಲ ಸಮಯ ಕುಳಿತ ಆರೋಪಿ ನಂತರ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ.
ಪತಿ ಹರ್ಷ ತನ್ನ 22 ವರ್ಷದ ಪತ್ನಿ ಅಂಶು ಶರ್ಮಾಳನ್ನು ಅತೀ ಕ್ರೂರವಾಗಿ ಕೊಲೆ ಮಾಡಿದ್ದಾನೆ. ಫ್ಲಾಟ್ ನಲ್ಲಿ ದಂಪತಿ ಇಬ್ಬರೇ ವಾಸವಾಗಿದ್ದು ಸಣ್ಣ ಸಣ್ಣ ವಿಚಾರಕ್ಕೂ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು. ಇದೇ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಿದ್ದಾನೆ. ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಕೊರೋನಾ ಲಾಕ್ ಡೌನ್ ನಿಂದಾಗಿ ಕಳೆದ ಆಗಸ್ಟ್ 8ರಂದು ಅಂಶು ಮತ್ತು ಹರ್ಷ ದೇವಸ್ಥಾನದಲ್ಲಿ ವಿವಾಹವಾಗಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಇಬ್ಬರಿಗೂ ಪರಿಚಯವಾಗಿ ನಂತರ ಪ್ರೀತಿಯ ಬಲೆಗೆ ಬಿದ್ದಿದ್ದರು. ಆದರೆ ಇದೀಗ ಎರಡನೇ ತಿಂಗಳಿಗೆ ಹರ್ಷ ಪತ್ನಿಯನ್ನು ಕೊಲೆ ಮಾಡಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


