ಕೊರೋನಾ ಪ್ರಭಾವ ಬಿಂಬಿಸಲು ಔಷಧಿಗಳು, ಇಂಜೆಕ್ಷನ್ ಬಾಟಲುಗಳಿಂದ ದುರ್ಗಾಮಾತೆ ವಿಗ್ರಹ ರಚಿಸಿದ ಅಸ್ಸಾಂ ಕಲಾವಿದ
ಮಹಾಮಾರಿ ಕೊರೋನಾ ವೈರಸ್ ನಿಂದ ಇಡೀ ಜಗತ್ತೇ ತತ್ತರಿಸಿ ಹೋಗಿದ್ದು, ಸಾಂಕ್ರಾಮಿಕ ರೋಗ ಪ್ರಭಾವ ಬಿಂಬಿಸಲು 37 ವರ್ಷದ ಅಸ್ಸಾಂ ಕಲಾವಿದರೊಬ್ಬರು ಅವಧಿ ಮೀರಿದ ಟ್ಯಾಬ್ಲೆಟ್‌ಗಳು, ಕ್ಯಾಪ್ಸುಲ್‌ಗಳು ಮತ್ತು ಇಂಜೆಕ್ಷನ್ ಬಾಟಲುಗಳೊಂದಿಗೆ ದುರ್ಗಾಮಾತೆಯ ವಿಗ್ರಹವನ್ನು ರಚಿಸಿದ್ದಾರೆ.

ಧುಬ್ರಿ: ಮಹಾಮಾರಿ ಕೊರೋನಾ ವೈರಸ್ ನಿಂದ ಇಡೀ ಜಗತ್ತೇ ತತ್ತರಿಸಿ ಹೋಗಿದ್ದು, ಸಾಂಕ್ರಾಮಿಕ ರೋಗ ಪ್ರಭಾವ ಬಿಂಬಿಸಲು 37 ವರ್ಷದ ಅಸ್ಸಾಂ ಕಲಾವಿದರೊಬ್ಬರು ಅವಧಿ ಮೀರಿದ ಟ್ಯಾಬ್ಲೆಟ್‌ಗಳು, ಕ್ಯಾಪ್ಸುಲ್‌ಗಳು ಮತ್ತು ಇಂಜೆಕ್ಷನ್ ಬಾಟಲುಗಳೊಂದಿಗೆ ದುರ್ಗಾಮಾತೆಯ ವಿಗ್ರಹವನ್ನು ರಚಿಸಿದ್ದಾರೆ.
ಸರ್ಕಾರಿ ನೌಕರರಾಗಿರುವ ಕಲಾವಿದ ಸಂಜಿಬ್ ಬಸಕ್ ಅವರು ಕಳೆದ ಕೆಲವು ವರ್ಷಗಳಿಂದ, ವಿಗ್ರಹವನ್ನು ವಿನ್ಯಾಸಗೊಳಿಸಲು ವಿವಿಧ ನವೀನ ಮತ್ತು ಪರಿಸರ ಸ್ನೇಹಿ ವಿಚಾರಗಳನ್ನು ಮಂಡಿಸಿದ್ದಾರೆ. ಆದರೆ ಈ ವರ್ಷ, COVID-19 ಬಿಕ್ಕಟ್ಟಿನ ಮಧ್ಯೆ, ಅವರು ಒಂದು ಬದಲಾವಣೆ ಮಾಡಲು ಬಯಸಿದ್ದರು. ಹೀಗಾಗಿ ಅವಧಿ ಮೀರಿದ ಔಷಧಿ ಮತ್ತು ಇಂಜೆಕ್ಷನ್ ನಿಂದ ದೇವಿಯ ವಿಗ್ರಹ ರಚಿಸಿದ್ದಾರೆ.
"ಲಾಕ್ ಡೌನ್ ಸಮಯದಲ್ಲಿ, ಜನರು ಅಗತ್ಯ ಔಷಧಿಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಔಷಧಿ ಅಂಗಡಿಗಳ ಮುಂದೆ ಕ್ಯೂ ನಿಂತಿರುವುದನ್ನು ನಾನು ಗಮನಿಸಿದ್ದೇನೆ. ಹಾಗ ಸಾಂಕ್ರಾಮಿಕ ರೋಗವನ್ನು ಬಿಂಬಿಸಲು ನಾನು ದುರ್ಗಾಮಾತೆಯ ವಿಗ್ರಹವನ್ನು ಔಷಧಿಯಿಂದ ತಯಾರಿಸಬಹುದೆಂಬ ಆಲೋಚನೆ ಬಂತು "ಎಂದು ಬಸಕ್ ಅವರು ಪಿಟಿಐಗೆ ತಿಳಿಸಿದ್ದಾರೆ.
ಕಳೆದ ಐದು ತಿಂಗಳಿಂದ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಸುಮಾರು 40,000 ಸ್ಟ್ರಿಪ್ ಮಾತ್ರೆಗಳು, ಕ್ಯಾಪ್ಸುಲ್ಗಳು ಮತ್ತು ವಿವಿಧ ಬಣ್ಣಗಳ ಇಂಜೆಕ್ಷನ್ ಬಾಟಲುಗಳನ್ನು ಸಂಗ್ರಹಿಸಿ ದೇವಿಯ ವಿಗ್ರಹ ರಚಿಸಿರುವುದಾಗಿ ಬಸಕ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


