ಸತತ ನಾಲ್ಕನೇ ದಿನವೂ ಕೋವಿಡ್-19 ಪಾಸಿಟಿವ್ ಪ್ರಮಾಣ ಶೇ.8ಕ್ಕಿಂತಲೂ ಕಡಿಮೆ: ಕೇಂದ್ರ ಸರ್ಕಾರ
ಸತತ ನಾಲ್ಕನೇ ದಿನವೂ ಕೋವಿಡ್ ಪಾಸಿಟಿವ್ ದರ ಶೇಕಡಾ 8ಕ್ಕಿಂತಲೂ ಕಡಿಮೆಯಾಗಿದ್ದು, ಸೋಂಕು ಹರಡುವಿಕೆ ಪರಿಣಾಮಕಾರಿಯಾಗಿ ನಿಯಂತ್ರಣಕ್ಕೆ ಬರುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಹೇಳಿದೆ.

ನವದೆಹಲಿ: ಸತತ ನಾಲ್ಕನೇ ದಿನವೂ ಕೋವಿಡ್ ಪಾಸಿಟಿವ್ ದರ ಶೇಕಡಾ 8ಕ್ಕಿಂತಲೂ ಕಡಿಮೆಯಾಗಿದ್ದು, ಸೋಂಕು ಹರಡುವಿಕೆ ಪರಿಣಾಮಕಾರಿಯಾಗಿ ನಿಯಂತ್ರಣಕ್ಕೆ ಬರುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಹೇಳಿದೆ.
ದೇಶದಲ್ಲಿ ಸತತವಾಗಿ ಪಾಸಿಟಿವ್ ದರ ಶೇ. 7.94 ರಷ್ಟಿದ್ದು, ಕುಸಿತ ಮುಂದುವರೆದಿದೆ.ದೇಶಾದ್ಯಂತ ಉನ್ನತ ಮಟ್ಟದ ಸಮಗ್ರ ಪರೀಕ್ಷೆಯಿಂದ ಇದು ಸಾಧ್ಯವಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಪಾಸಿಟಿವ್ ದರದಲ್ಲಿನ ಕುಸಿತವೂ ಸಾಂಕ್ರಾಮಿಕ ರೋಗದ ಹರಡುವಿಕೆ ನಿಯಂತ್ರಣವನ್ನು ತೋರಿಸುತ್ತಿದೆ. ಸೋಂಕುನ್ನು ಬೇಗನೆ ಗುರುತಿಸಿ, ಸೂಕ್ತ ಸಮಯಕ್ಕೆ ಪರಿಣಾಮಕಾರಿ ಚಿಕಿತ್ಸೆ ನೀಡುತ್ತಿರುವುದರಿಂದ ಮರಣ ಪ್ರಮಾಣದಲ್ಲೂ ಕಡಿಮೆಯಾಗಿದೆ ಎಂದು ಮಾಹಿತಿ ನೀಡಿದೆ.
ಈವರೆಗೂ ಕೊರೋನಾವೈರಸ್ ಸೋಂಕು ಪತ್ತೆಯಾಗಿ ನಡೆಸಲಾಗಿರುವ ಒಟ್ಟಾರೇ, ಪರೀಕ್ಷೆಗಳ ಸಂಖ್ಯೆ 9.5 ಕೋಟಿಯನ್ನು ದಾಟಿದೆ.ಅಕ್ಟೋಬರ್ ಮೂರನೇ ವಾರದಲ್ಲಿ ಸರಾಸರಿ ದೈನಂದಿನ ಪಾಸಿಟಿವ್ ದರ ಪ್ರಮಾಣವು ಶೇಕಡಾ 6.13 ಆಗಿದೆ ಎಂದು ಸಚಿವಾಲಯ ತಿಳಿಸಿದೆ.
ಇದು ಕೇಂದ್ರ ಸರ್ಕಾರದ ಯಶಸ್ವಿ ಸೋಂಕು ಪರೀಕ್ಷೆ, ಪತ್ತೆ, ಚಿಕಿತ್ಸೆ ಮತ್ತು ತಾಂತ್ರಿಕ ಪರಿಣಾಮವಾಗಿದೆ. ಇದನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪರಿಣಾಮಕಾರಿಯಾಗಿ ಅನುಸರಿಸುತ್ತಿವೆ ಎಂದು ಒತ್ತಿ ಹೇಳಿದೆ.
ಸಕ್ರಿಯ ಪ್ರಕರಣಗಳಲ್ಲಿ ದೇಶವು ಸ್ಥಿರ ಕುಸಿತವನ್ನು ಕಾಣುತ್ತಿದ್ದು, ಸೋಮವಾರ ಕೊರೊನಾವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳು ಸತತ ಮೂರನೇ ದಿನ 8 ಲಕ್ಷಕ್ಕಿಂತ ಕಡಿಮೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


