ದೇಶ

ಪದ್ಮಭೂಷಣ ಪ್ರಶಸ್ತಿ ವಿಜೇತ ಕರ್ನಾಟಕ ಸಂಗೀತ ದಿಗ್ಗಜ ಪಿ.ಎಸ್. ನಾರಾಯಣಸ್ವಾಮಿ ಇನ್ನಿಲ್ಲ

ಕರ್ನಾಟಕ ಸಂಗೀತದ ಅತ್ಯುತ್ತಮ ಗುರುಗಳಲ್ಲಿ ಒಬ್ಬರಾದ, ಪದ್ಮಭೂಷಣ ವಿದ್ವಾನ್ ಪುಲಿಯೂರ್ ಸುಬ್ರಮಣ್ಯಂ ನಾರಾಯಣಸ್ವಾಮಿ(86) ನಿನ್ನೆ ರಾತ್ರಿ ತಮ್ಮ ನಿವಾಸದಲ್ಲಿ ನಿಧನರಾದರು.

ಪದ್ಮಭೂಷಣ ಪ್ರಶಸ್ತಿ ವಿಜೇತ ಕರ್ನಾಟಕ ಸಂಗೀತ ದಿಗ್ಗಜ ಪಿ.ಎಸ್. ನಾರಾಯಣಸ್ವಾಮಿ ಇನ್ನಿಲ್ಲ
ಪಿ ಎಸ್ ನಾರಾಯಣಸ್ವಾಮಿ
Published On :

ಚೆನ್ನೈ: ಕರ್ನಾಟಕ ಸಂಗೀತದ ಅತ್ಯುತ್ತಮ ಗುರುಗಳಲ್ಲಿ ಒಬ್ಬರಾದ, ಪದ್ಮಭೂಷಣ ವಿದ್ವಾನ್ ಪುಲಿಯೂರ್ ಸುಬ್ರಮಣ್ಯಂ ನಾರಾಯಣಸ್ವಾಮಿ(86) ನಿನ್ನೆ ರಾತ್ರಿ ತಮ್ಮ ನಿವಾಸದಲ್ಲಿ ನಿಧನರಾದರು.

ಭಾರತ ಸರ್ಕಾರದ ಪದ್ಮಭೂಷಣ, ಮತ್ತು ತಮಿಳುನಾಡು ಸರ್ಕಾರದ ಕಲೈಮಮಣಿ ಸೇರಿದಂತೆ ಅನೇಕ ಪ್ರಶಸ್ತಿಗೆ ಭಾಜನರಾಗಿದ್ದ ನಾರಾಯಣಸ್ವಾಮಿ ಅವರು ಶೆಮ್ಮಂಗುಡಿ ಸಂಪ್ರದಾಯದ ಮಹತ್ವದ ಸಾಧಕರಾಗಿದ್ದರು. ತಮ್ಮದೇ ಆದ ಶೈಲಿಯ ‘ಮನೋಧರ್ಮ ಸಂಗೀತ’ವನ್ನು ವಿಕಸನಗೊಳಿಸಿದ ಕೀರ್ತಿ ಇವರದಾಗಿದೆ.

ಸಂಗೀತಗಾರ ಪಿ.ಎಸ್. ನಾರಾಯಣಸ್ವಾಮಿ ಅವರು ತಮ್ಮ ಗುರು ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರಿಂದ ಕಲಿತ ಸಂಗೀತದ ಪಾಠದಿಂದ ಅತ್ಯುತ್ತಮ ಸಾಧಕರಾಗಿ ಗುರುತಿಸಿಕೊಂಡಿದ್ದರು.

ಮೃತರಿಗೆ ಪತ್ನಿ, ಮೂವರು ಪುತ್ರಿಯರು ಮತ್ತು ಅಸಂಖ್ಯಾತ ಶಿಷ್ಯರು ಇದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.