ದೇಶ

ಶೌರ್ಯ ಪ್ರಶಸ್ತಿ ಪಡೆದಿದ್ದ ಪಾಕ್ ಸೇನಾಧಿಕಾರಿ ಸಮಾಧಿಯನ್ನು ದುರಸ್ತಿ ಮಾಡಿದ ಭಾರತೀಯ ಸೇನೆ

ವಿಶ್ವದ ಅತ್ಯಂತ ವೃತ್ತಿಪರ ಹಾಗೂ ನೈತಿಕತೆ ಹೊಂದಿದ ಸೇನೆಗಳಲ್ಲಿ ಭಾರತೀಯ ಸೇನೆ ಕೂಡ ಒಂದು ಎಂಬುದು ಇದೀಗ ಮತ್ತೊಮ್ಮೆ ಸಾಬೀತಾಗಿದೆ. ಹಾನಿಗೊಳಗಾಗಿದ್ದ ಪಾಕಿಸ್ತಾನ ಅಧಿಕಾರಿಯೊಬ್ಬರ ಸಮಾಧಿಯನ್ನು ಪುನಃ ಸ್ಥಾಪಿಸುವ ಮೂಲಕ ಗೌರವ ಸಲ್ಲಿಸಿದೆ.

ಶೌರ್ಯ ಪ್ರಶಸ್ತಿ ಪಡೆದಿದ್ದ ಪಾಕ್ ಸೇನಾಧಿಕಾರಿ ಸಮಾಧಿಯನ್ನು ದುರಸ್ತಿ ಮಾಡಿದ ಭಾರತೀಯ ಸೇನೆ
ಭಾರತೀಯ ಸೇನೆ ದುರಸ್ತಿ ಮಾಡಿರುವ ಪಾಕ್ ಅಧಿಕಾರಿಯ ಸಮಾಧಿ
Published On :

ಶ್ರೀನಗರ: ವಿಶ್ವದ ಅತ್ಯಂತ ವೃತ್ತಿಪರ ಹಾಗೂ ನೈತಿಕತೆ ಹೊಂದಿದ ಸೇನೆಗಳಲ್ಲಿ ಭಾರತೀಯ ಸೇನೆ ಕೂಡ ಒಂದು ಎಂಬುದು ಇದೀಗ ಮತ್ತೊಮ್ಮೆ ಸಾಬೀತಾಗಿದೆ. ಹಾನಿಗೊಳಗಾಗಿದ್ದ ಪಾಕಿಸ್ತಾನ ಅಧಿಕಾರಿಯೊಬ್ಬರ ಸಮಾಧಿಯನ್ನು ಪುನಃ ಸ್ಥಾಪಿಸುವ ಮೂಲಕ ಗೌರವ ಸಲ್ಲಿಸಿದೆ. ಈ ಮೂಲಕ ಸೈನಿಕನೇ ಮೊದಲು ಉಳಿದದ್ದೆಲ್ಲ ನಂತರ ಎಂಬ ಧ್ಯೇಯ ವಾಕ್ಯದ ಬದ್ಧತೆಯನ್ನು ಭಾರತೀಯ ಸೇನೆ ಪ್ರದರ್ಶಿಸಿದೆ. 

ಭಾರತದ ಸೇನೆ ಮತ್ತು ಚಿನಾರ್ ಕಾರ್ಪ್ಸ್ ಸಂಪ್ರದಾಯದಂತೆ ನೌಗಂನ ಗಡಿ ನಿಯಂತ್ರಣ ರೇಖೆಯಲ್ಲಿ 1972 ಮೇ 05 ರಂದು ಮೃತಪಟ್ಟ ಪಾಕಿಸ್ತಾನ ಸೇನೆಯ ಸಿತಾರಾ ಇ ಜುರಾತ್ ಮೊಹಮ್ಮದ್ ಶಬೀರ್ ಖಾನ್ ಅವರ ಸಮಾಧಿ ದುರಸ್ತಿ ಮಾಡಲಾಗಿದೆ ಎಂದು ಚಿನಾರ್ ಕಾರ್ಪ್ಸ್ ಟ್ವೀಟ್ ಮಾಡಿದೆ.

ಮೇಜರ್ ಮೊಹಮ್ಮದ್ ಶಬ್ಬಿರ್ ಖಾನ್ ನೆನಪಿನಾರ್ಥವಾಗಿ ಸಿತಾರ್-ಎ-ಜುರತ್ ಶಾಹಿದ್ 5 ಮೇ, 1972, 1630 ಎಚ್ ಅವರು ಇ ಸಿಖ್ಖರ ಪ್ರತಿ ದಾಳಿ ವೇಳೆ ಸಾವನ್ನಪ್ಪಿದ್ದಾರೆ ಎಂದು ಟ್ವೀಟ್‍ನಲ್ಲಿ ಬರೆದುಕೊಂಡಿದೆ. 

ಈ ಕುರಿತು ಹೇಳಿಕೆ ನೀಡಿರುವ ಭಾರತೀಯ ಸೇನೆ, ಭಾರತೀಯ ಸೇನೆ ನಂಬುವಂತೆ ಮೃತನಾದ ಯೋಧ ಯಾವುದೇ ದೇಶದವನಾದರೂ ಅದನ್ನೂ ಮೀರಿ ಎಲ್ಲ ಗೌರವಕ್ಕೆ ಅರ್ಹ. ಜಗತ್ತಿನಲ್ಲಿ ಭಾರತೀಯ ಸೇನೆಯ ರೀತಿ ಇದು ಎಂದು ತಿಳಿಸಿದೆ. 

ಶಬ್ಬಿರ್ ಖಾನ್ ಅವರು 1972ರಲ್ಲಿ ಗಡಿ ನಿಯಂತ್ರಣ ರೇಖೆ(ಎಲ್‍ಒಸಿ) ಬಳಿ ಭಾರತೀಯ ಸೈನಿಕರ ದಾಳಿಗೆ ತುತ್ತಾಗಿ, ಸಾವನ್ನಪ್ಪಿದ್ದರು. ಖಾನ್ ಪಾಕಿಸ್ತಾನದ ಮೂರನೇ ಅತ್ಯುನ್ನತ ಮಿಲಿಟರಿ ಪ್ರಶಸ್ತಿಯಾದ ಸೀತಾರಾ-ಎ-ಜುರಾತ್ ಪಡೆದವರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.