ರಾತ್ರಿ ವೇಳೆ ಮನೆಗೆ ತೆರಳುತ್ತಿದ್ದ ಗಿರ್ ಅರಣ್ಯ ರಕ್ಷಕನಿಗೆ ಎದುರಾಯ್ತು ಭಯಾನಕ ಸಿಂಹ: ವಿಡಿಯೋ ವೈರಲ್
ರಾತ್ರಿ ವೇಳೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಗಿರ್ ಅರಣ್ಯ ರಕ್ಷಕನಿಗೆ ಮಾರ್ಗ ಮಧ್ಯದಲ್ಲಿ ಭಯಾನಕ ಸಿಂಹ ಎದುರಾಗಿದ್ದು, ಇದರ ವಿಡಿಯೋ ವೈರಲ್ ಆಗತೊಡಗಿದೆ.

ಗಿರ್: ರಾತ್ರಿ ವೇಳೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಗಿರ್ ಅರಣ್ಯ ರಕ್ಷಕನಿಗೆ ಮಾರ್ಗ ಮಧ್ಯದಲ್ಲಿ ಭಯಾನಕ ಸಿಂಹ ಎದುರಾಗಿದ್ದು, ಇದರ ವಿಡಿಯೋ ವೈರಲ್ ಆಗತೊಡಗಿದೆ.
ಗಾರ್ಡ್ ಮಹೇಶ್ ಸೌಂದರ್ವ ತಮಗೆ ಮಾರ್ಗಮಧ್ಯದಲ್ಲಿ ಎದುರಾದ ಸಿಂಹದ ವಿಡಿಯೋ ಚಿತ್ರೀಕರಿಸಿ ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಡಾ. ಅಂಶುಮಾನ್ ಅವರೊಂದಿಗೆ ಹಂಚಿಕೊಂಡಿದ್ದಾರೆ. ಡಾ. ಅಂಶುಮಾನ್ ಟ್ವಿಟರ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದು ವ್ಯಾಪಕವಾಗಿ ಹಂಚಿಕೆಯಾಗತೊಡಗಿದೆ.
ತಮಗೆ ಎದುರಾದ ಸಿಂಹಕ್ಕೆ ಸೌಂದರ್ವ ದಾರಿ ಬಿಡುವಂತೆ ಮನವಿ ಮಾಡಿದ್ದು, ಅದೃಷ್ಟವೋ ಅಥವಾ ಕಾಕತಾಳಿಯವೋ ಎಂಬಂತೆ ಸಿಂಹ ಅರಣ್ಯ ರಕ್ಷಕನಿಗೆ ದಾರಿ ಮಾಡಿಕೊಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


