ಬಡ್ಡಿ ದರ ನಿರ್ಧರಿಸುವ ಎಂಪಿಸಿ ಸಮಿತಿಗೆ ಅಶೀಮಾ ಗೋಯಲ್, ಶಶಾಂಕ್ ಭಿಡೆ, ಜಯಂತ್ ವರ್ಮಾ ನೇಮಕ
ಬಡ್ಡಿ ದರ ನಿರ್ಧರಿಸುವ ಮಹತ್ವದ ಸಮಿತಿಗೆ ಕೇಂದ್ರ ಸರ್ಕಾರ ಅಶೀಮಾ ಗೋಯಲ್, ಶಶಾಂಕ್ ಭಿಡೆ ಜಯಂತ್ ವರ್ಮಾ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದೆ.

ನವದೆಹಲಿ: ಬಡ್ಡಿ ದರ ನಿರ್ಧರಿಸುವ ಮಹತ್ವದ ಸಮಿತಿಗೆ ಕೇಂದ್ರ ಸರ್ಕಾರ ಅಶೀಮಾ ಗೋಯಲ್, ಶಶಾಂಕ್ ಭಿಡೆ ಜಯಂತ್ ವರ್ಮಾ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದೆ.
ಅ.06 ರಂದು ಆದೇಶ ನೀಡಲಾಗಿದ್ದು ಅ.2024 ರ ಅವಧಿವರೆಗೆ ನೇಮಕ ಮಾಡಲಾಗಿದೆ. ಈ ಹಿಂದೆ ಸಮಿತಿಯಲ್ಲಿದ್ದ ಚೇತನ್ ಘಟೆ, ಪಮಿ ದುವಾ, ರವೀಂದ್ರ ಧೋಲಾಕಿಯಾ ಅವರ ಅವಧಿ ಸೆ.22, 2020 ಕ್ಕೆ ಕೊನೆಗೊಂಡಿತ್ತು.
ಹೊಸದಾಗಿ ನೇಮಕಗೊಂಡಿರುವ ಸದಸ್ಯರು ಆರ್ ಬಿಐ ಗೌರ್ನರ್ ಶಕ್ತಿಕಾಂತ್ ದಾಸ್ ಅವರೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ.
ಅಶಿಮಾ ಗೋಯಲ್: ಪ್ರಧಾನ ಮಂತ್ರಿಗಳ ಆರ್ಥಿಕ ಸಹಲಾ ತಂಡದಲ್ಲಿ ಸದಸ್ಯರಾಗಿದ್ದ ಅಶೀಮಾ ಗೋಯಲ್, ಮುಂಬೈ ನ ಇಂದಿರಾ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ರಿಸರ್ಚ್ ನಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿದ್ದಾರೆ.
ಶಶಾಂಕ್ ಭಿಡೆ: ದೆಹಲಿಯ ಅನ್ವಯಿಕ ಆರ್ಥಿಕ ಸಂಶೋಧನೆ (Applied Economic Research ) ನಲ್ಲಿ ಹಿರಿಯ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಜಯಂತ್ ಆರ್ ವರ್ಮ: ಐಐಎಂ ಅಹ್ಮದಾಬಾದ್ ನಲ್ಲಿ ಫೈನಾನ್ಸ್ ಹಾಗೂ ಅಕೌಂಟಿಂಗ್ ವಿಭಾಗದ ಪ್ರೊಫೆಸರ್ ಆಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


