ದೇಶ

ನಮ್ಮದೇ ಭಾಷೆ ಬಳಸುವುದರಿಂದ ಮಾತ್ರ ಅಭಿವೃದ್ಧಿ ಸಾಧ್ಯ: ಕೇಂದ್ರ ಸಚಿವ ಪೋಖ್ರಿಯಾಲ್

ಪ್ರಾದೇಶಿಕ ಮತ್ತು ಸೈದ್ಧಾಂತಿಕ ಸಂಕುಚಿತತೆಗನ್ನು ಮೀರಿ ನಮ್ಮ ಭಾಷೆ ಮತ್ತು ನಮ್ಮ ಗುರುತನ್ನು ಪ್ರತಿಷ್ಠಾಪಿಸಿದರೆ ದೇಶ ಮುಂದೆ ಪ್ರಗತಿ ಹೊಂದುವುದನ್ನು ಯಾರೊಬ್ಬರೂ ತಡೆಯಲು ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಸೋಮವಾರ ಹೇಳಿದ್ದಾರೆ.

ನಮ್ಮದೇ ಭಾಷೆ ಬಳಸುವುದರಿಂದ ಮಾತ್ರ ಅಭಿವೃದ್ಧಿ ಸಾಧ್ಯ: ಕೇಂದ್ರ ಸಚಿವ ಪೋಖ್ರಿಯಾಲ್
ಪೋಖ್ರಿಯಲ್
Published On :

ನವದೆಹಲಿ: ಪ್ರಾದೇಶಿಕ ಮತ್ತು ಸೈದ್ಧಾಂತಿಕ ಸಂಕುಚಿತತೆಗನ್ನು ಮೀರಿ ನಮ್ಮ ಭಾಷೆ ಮತ್ತು ನಮ್ಮ ಗುರುತನ್ನು ಪ್ರತಿಷ್ಠಾಪಿಸಿದರೆ ದೇಶ ಮುಂದೆ ಪ್ರಗತಿ ಹೊಂದುವುದನ್ನು ಯಾರೊಬ್ಬರೂ ತಡೆಯಲು ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಸೋಮವಾರ ಹೇಳಿದ್ದಾರೆ. 

ಹೈದರಾಬಾದ್ ನ ಕೇಂದ್ರೀಯ ಹಿಂದೀ ಸಂಸ್ಥೆಯ ಕಟ್ಟಡವನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿ ಮಾತನಾಡಿದ ಡಾ. ರಮೇಶ್ ಪೋಖ್ರಿಯಾಲ್, ‘ನಾವು ನಮ್ಮ ಗುರುತು, ನಮ್ಮ ಭಾಷೆಯನ್ನು ಬಳಸಿದರೆ ಮತ್ತು ಪ್ರಾದೇಶಿಕ, ಸೈದ್ಧಾಂತಿಕ ಸಂಕುಚಿತತೆಗಿಂತ ಮೀರಿ ಹೊರಬಂದರೆ ದೇಶ ಮುಂದೆ ಸಾಗುವುದನ್ನು ಯಾವುದೇ ಶಕ್ತಿ ತಡೆಯಲು ಸಾಧ್ಯವಿಲ್ಲ ಎಂದರು.

ತಮ್ಮದೇ ಭಾಷೆಯಿಲ್ಲದೆ ಮುಂದುವರೆಯಲು ಸಾಧ್ಯವಿಲ್ಲ ಎಂಬುದಕ್ಕೆ  ಜರ್ಮನಿ, ಫ್ರಾನ್ಸ್, ಇಸ್ರೇಲ್ ಮತ್ತು ಜಪಾನ್‌ನಂತಹ ವಿಶ್ವದ ಶ್ರೀಮಂತ ಮತ್ತು ಅಭಿವೃದ್ಧಿ ಹೊಂದಿದ ದೇಶಗಳು ಉದಾಹರಣೆಯಾಗಿವೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.