ಕೊರೋನಾಗೆ ಮತ್ತೊಬ್ಬ ರಾಜಕಾರಣಿ ಬಲಿ: ಎನ್ ಸಿಪಿ ಶಾಸಕ ಭರತ್ ಭಾಲ್ಕೆ ನಿಧನ
ಕೊರೊನಾ ಸೋಂಕಿಗೆ ಮಹಾರಾಷ್ಟ್ರದಲ್ಲಿ ಶಾಸಕರೊಬ್ಬರು ಬಲಿಯಾಗಿದ್ದಾರೆ. ಪಂಡರಾಪುರ-ಮಂಗಲವೇದ ವಿಧಾನಸಭಾ ಕ್ಷೇತ್ರದ ಶಾಸಕ ಭರತ್ ಭಾಲ್ಕೆ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ಪುಣೆ: ಕೊರೊನಾ ಸೋಂಕಿಗೆ ಮಹಾರಾಷ್ಟ್ರದಲ್ಲಿ ಶಾಸಕರೊಬ್ಬರು ಬಲಿಯಾಗಿದ್ದಾರೆ. ಪಂಡರಾಪುರ-ಮಂಗಲವೇದ ವಿಧಾನಸಭಾ ಕ್ಷೇತ್ರದ ಶಾಸಕ ಭರತ್ ಭಾಲ್ಕೆ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಭರತ್ ಭಾಲ್ಕೆ ಕಳೆದ ಚುನಾವಣೆಯಲ್ಲಿ ಎನ್ ಸಿಪಿಯಿಂದ ಆಯ್ಕೆಯಾಗಿದ್ದರು. ಹಲವು ದಿನಗಳಿಂದ ಕೊರೋನಾದಿಂದ ಬಳಲುತ್ತಿದ್ದ ಭಾಲ್ಕೆ ಪುಣೆ ಆಸ್ಪತ್ರೆಗೆ ನವೆಂಬರ್ 9 ರಂದು ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಸೋಂಕಿಗೆ ಬಲಿಯಾಗಿದ್ದಾರೆ.
ಕೊರೋನಾ ಸೊಂಕಿಗೆ ಒಳಗಾಗಿದ್ದ ಭಾಲ್ಕೆ ಅಕ್ಟೋಬರ್ 30 ರಂದು ಮನೆಗೆ ತೆರಳಿದ್ದರು ಎಂದು ಭಾಲ್ಕೆ ಅವರಿಗೆ ಚಿಕಿತ್ಸೆ ನೀಡಿದ್ದ
ವೈದ್ಯರೊಬ್ಬರು ತಿಳಿಸಿದ್ದಾರೆ.
ಮತ್ತೆ ಕೆಮ್ಮು ಮತ್ತು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನವೆಂಬರ್ 9 ರಂದು ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟ ಹಿನ್ನೆಲೆಯಲ್ಲಿ ವೆಂಟಿಲೇಟರ್ ನಲ್ಲಿ ಇಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


