ಕೋವಿಡ್-19: ಡಿಸೆಂಬರ್ ವೇಳೆಗೆ ಭಾರತಕ್ಕೆ ಸಿಗಲಿದೆ 100 ಮಿಲಿಯನ್ ಆಸ್ಟ್ರಾಝೆನಿಕ ಲಸಿಕೆ
ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಕೋವಿಡ್-19 ಲಸಿಕೆ ಆಸ್ಟ್ರಾಝೆನಿಕಾದ ಲಸಿಕೆ ಉತ್ಪಾದನೆಯನ್ನು ಶೀಘ್ರಗೊಳಿಸುತ್ತಿದ್ದು, ಡಿಸೆಂಬರ್ ವೇಳೆಗೆ 100 ಮಿಲಿಯನ್ ಆಸ್ಟ್ರಾಝೆನಿಕಾ ಲಸಿಕೆ ಭಾರತಕ್ಕೆ ಲಭ್ಯವಾಗಲಿದೆ.

ನವದೆಹಲಿ: ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಕೋವಿಡ್-19 ಲಸಿಕೆ ಆಸ್ಟ್ರಾಝೆನಿಕಾ ಲಸಿಕೆ ಉತ್ಪಾದನೆಯನ್ನು ಶೀಘ್ರಗೊಳಿಸುತ್ತಿದ್ದು, ಡಿಸೆಂಬರ್ ವೇಳೆಗೆ 100 ಮಿಲಿಯನ್ ಆಸ್ಟ್ರಾಝೆನಿಕಾ ಲಸಿಕೆ ಭಾರತಕ್ಕೆ ಲಭ್ಯವಾಗಲಿದೆ.
ಬ್ಲೂಮ್ ಬರ್ಗ್ ಗೆ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ನ ಸಿಇಒ ಅದಾರ್ ಪೂನಾವಾಲ ಅವರು ಸಂದರ್ಶನ ನೀಡಿದ್ದು, ಆಸ್ಟ್ರಾಝೆನಿಕಾ ಲಸಿಕೆ ಅಂತಿಮ ಹಂತದ ಪರೀಕ್ಷೆಯಲ್ಲಿದ್ದು ಕೊರೋನಾ ವೈರಾಣುವಿನಿಂದ ಅತ್ಯುತ್ತಮ ರಕ್ಷಣೆ ನೀಡುತ್ತಿದೆ. ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕನಿಷ್ಟ ಒಂದು ಬಿಲಿಯನ್ ಲಸಿಕೆಗಳನ್ನು ಉತ್ಪಾದಿಸಲು ಕೈಜೋಡಿಸಿದ್ದು, ದೆಹಲಿಯಿಂದ ತುರ್ತು ಅನುಮತಿಯನ್ನು ಪಡೆಯುವ ಸಾಧ್ಯತೆ ಇದೆ ಎಂದು ಅದಾರ್ ಪೂನಾವಾಲ ತಿಳಿಸಿದ್ದಾರೆ.
ಪ್ರಾರಂಭಿಕವಾಗಿ ಭಾರತಕ್ಕೆ ಈ ಲಸಿಕೆಗಳು ಸಿಗುತ್ತವೆ. ಮುಂದಿನ ವರ್ಷದ ಆರಂಭದಲ್ಲಿ, ಬಡ ರಾಷ್ಟ್ರಗಳಿಗಾಗಿ ವಿಶ್ವಸಂಸ್ಥೆ ಬೆಂಬಲಿತ ಸಂಸ್ಥೆ ಕೋವ್ಯಾಕ್ಸ್ ಹಾಗೂ ಭಾರತದ ನಡುವೆ 50-50 ಅನುಪಾತದಲ್ಲಿ ಲಸಿಕೆಗಳು ಹಂಚಿಕೆಯಾಗಲಿವೆ ಎಂದು ಪೂನಾವಾಲಾ ತಿಳಿಸಿದ್ದಾರೆ.
ಎಸ್ಐಐ 5 ಡೆವಲಪರ್ ಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದು, 40 ಮಿಲಿಯನ್ ಗೂ ಅಧಿಕ ಆಸ್ಟ್ರಾಝೆನಿಕಾದ ಲಸಿಕೆಗಳನ್ನು ತಯಾರಿಸಿದೆ ಎಂಡು ಪೂನಾವಾಲ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


