ರಾಷ್ಟ್ರಪತಿಗೆ ಹಣಕಾಸು ಆಯೋಗದ ವರದಿ ಸಲ್ಲಿಕೆ
2021-22 ರಿಂದ 2025-26ರ ವರೆಗಿನ ಅವಧಿಯ ‘ಕೋವಿಡ್ ಸಮಯದಲ್ಲಿ ಹಣಕಾಸು ಆಯೋಗ’ ಶೀರ್ಷಿಕೆಯ ಆಯೋಗದ ವರದಿಯನ್ನು ಹಣಕಾಸು ಆಯೋಗದ ಅಧ್ಯಕ್ಷ ಎನ್ ಕೆ ಸಿಂಗ್ ಸೋಮವಾರ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರಿಗೆ ಸಲ್ಲಿಸಿದರು.

ನವದೆಹಲಿ: 2021-22 ರಿಂದ 2025-26ರ ವರೆಗಿನ ಅವಧಿಯ ‘ಕೋವಿಡ್ ಸಮಯದಲ್ಲಿ ಹಣಕಾಸು ಆಯೋಗ’ ಶೀರ್ಷಿಕೆಯ ಆಯೋಗದ ವರದಿಯನ್ನು ಹಣಕಾಸು ಆಯೋಗದ ಅಧ್ಯಕ್ಷ ಎನ್ ಕೆ ಸಿಂಗ್ ಸೋಮವಾರ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರಿಗೆ ಸಲ್ಲಿಸಿದರು.
ಆಯೋಗದ ಸದಸ್ಯರಾದ ಅಜಯ್ ನಾರಾಯಣ್ ಜಾ, ಪ್ರೊಫೆಸರ್ ಅನೂಪ್ ಸಿಂಗ್, ಡಾ.ಅಶೋಕ್ ಲಾಹಿರಿ ಮತ್ತು ಡಾ.ರಮೇಶ್ ಚಂದ್, ಆಯೋಗದ ಕಾರ್ಯದರ್ಶಿ ಅರವಿಂದ್ ಮೆಹ್ತಾ ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 2021-22 ರಿಂದ 2025-26 ವರೆಗೆ ಐದು ವರ್ಷಗಳವರೆಗಿನ ಅವಧಿಗೆ ಶಿಫಾರಸ್ಸುಗಳನ್ನು ಅ 30 ರೊಳಗೆ ನೀಡಲು ಆಯೋಗಕ್ಕೆ ಆದೇಶಿಸಲಾಗಿತ್ತು.
ಕಳೆದ ವರ್ಷ, ಆಯೋಗ ಸಲ್ಲಿಸಿದ್ದ 2020-21ನೇ ಸಾಲಿನ ಶಿಫಾರಸುಗಳನ್ನು ಒಳಗೊಂಡ ತನ್ನ ವರದಿಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿತ್ತು. ವರದಿಯನ್ನು 2020 ರ ಜ 30 ರಂದು ಸಂಸತ್ತಿನಲ್ಲಿ ಮಂಡಿಸಿತ್ತು. ವಿಶಿಷ್ಟ ಮತ್ತು ವ್ಯಾಪಕ ವಿಷಯಗಳ ಕುರಿತು ತನ್ನ ಶಿಫಾರಸುಗಳನ್ನು ನೀಡುವಂತೆ ಆಯೋಗಕ್ಕೆ ಸರ್ಕಾರ ಸೂಚಿಸಿತ್ತು. ತೆರಿಗೆ ಹಂಚಿಕೆ, ಸ್ಥಳೀಯ ಸರ್ಕಾರದ ಅನುದಾನ, ವಿಪತ್ತು ನಿರ್ವಹಣಾ ಅನುದಾನದ ಹೊರತಾಗಿ, ವಿದ್ಯುತ್ ಕ್ಷೇತ್ರ, ನೇರ ಹಣ ವರ್ಗಾವಣೆ ಅಳವಡಿಸಿಕೊಳ್ಳುವುದು, ಘನತ್ಯಾಜ್ಯ ನಿರ್ವಹಣೆ ಮುಂತಾದ ಹಲವು ಕ್ಷೇತ್ರಗಳಲ್ಲಿ ರಾಜ್ಯಗಳ ಕಾರ್ಯಕ್ಷಮತೆ ಪ್ರೋತ್ಸಾಹಿಸುವ ಕುರಿತು ಶಿಫಾರಸು ಮಾಡುವಂತೆಯೂ ಆಯೋಗಕ್ಕೆ ಸೂಚಿಸಲಾಗಿತ್ತು. ರಕ್ಷಣಾ ಮತ್ತು ಆಂತರಿಕ ಭದ್ರತೆಗೆ ನಿಧಿ ಒದಗಿಸಲು ಪ್ರತ್ಯೇಕ ಕಾರ್ಯವಿಧಾನವನ್ನು ಸ್ಥಾಪಿಸಬೇಕೇ ಎಂಬ ಕುರಿತು ಪರಿಶೀಲಿಸಲು ಆಯೋಗವನ್ನು ಕೇಳಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


