ಆಸ್ಪತ್ರೆಯಲ್ಲಿ ಗ್ಯಾಂಗ್ ರೇಪ್: ರಕ್ಷಿಸಬೇಕಾದ ಗಾರ್ಡ್ ಕೂಡ ಶಾಮೀಲು, ಮೂವರ ಬಂಧನ
ಆಸ್ಪತ್ರೆಯ ಪಾರ್ಕಿಂಗ್ ಪ್ರದೇಶದಲ್ಲಿ ಮಹಿಳೆ ಮೇಲೆ ಕಾಮಾಂಧರು ಅತ್ಯಾಚಾರವೆಸಗಿದ್ದು, ಸೆಕ್ಯುರಿಟಿ ಗಾರ್ಡ್ ಸೇರಿ ಮೂವರನ್ನು ಬಂಧಿಸಲಾಗಿದೆ.

ನವದೆಹಲಿ: ಆಸ್ಪತ್ರೆಯ ಪಾರ್ಕಿಂಗ್ ಪ್ರದೇಶದಲ್ಲಿ ಮಹಿಳೆ ಮೇಲೆ ಕಾಮಾಂಧರು ಅತ್ಯಾಚಾರವೆಸಗಿದ್ದು, ಸೆಕ್ಯುರಿಟಿ ಗಾರ್ಡ್ ಸೇರಿ ಮೂವರನ್ನು ಬಂಧಿಸಲಾಗಿದೆ.
ದೆಹಲಿಯ ರೋಹಿಣಿ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದ್ದು, ರೋಗಿಗಳೊಂದಿಗೆ ಬಂದಿರುವವರು ವಿಶ್ರಮಿಸಲು ಮೀಸಲಾಗಿರುವ ಕೋಠಡಿಯನ್ನು ತಪಾಸಣೆ ನಡೆಸುತ್ತಿದ್ದ ಸೆಕ್ಯುರಿಟಿ ಗಾರ್ಡ್, ಆ ಕೋಠಡಿಯಲ್ಲಿ ಮಹಿಳೆಯನ್ನು ತಾವು ಯಾರೊಟ್ಟಿಗೆ ಬಂದಿದ್ದೀರಿ ರೋಗಿಯ ವಿವರಗಳನ್ನು ನೀಡಿ ಎಂದು ಕೇಳಿದ್ದಾನೆ, ಆದರೆ ಮಹಿಳೆ ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದ್ದು, ಆಕೆಯನ್ನು ತಪಾಸಣೆಯ ನೆಪದಲ್ಲಿ ಯಾರು ಇಲ್ಲದ ಪಾರ್ಕಿಂಗ್ ಪ್ರದೇಶಕ್ಕೆ ಕರೆದೊಯ್ದಿದ್ದಾನೆ.
ಸೆಕ್ಯುರಿಟಿ ಗಾರ್ಡ್ ಕನ್ವರ್ ಪಾಲ್ ನೊಂದಿಗೆ ಆಸ್ಪತ್ರೆಯ ಮಾಜಿ ಬೌನ್ಸರ್ ಗಳಾದ ಪ್ರವೀಣ್ ಹಾಗೂ ಮನೀಶ್ ಕೂಡ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾರೆ.
ಮಹಿಳೆ ತನ್ನ ಸ್ನೇಹಿತರೊಂದಿಗೆ ಪೊಲೀಸ್ ಠಾಣೆಗೆ ತೆರಳಿ ನಡೆದ ಘಟನೆ ಬಗ್ಗೆ ತಿಳಿಸಿದ್ದಾರೆ. ತಕ್ಷಣವೇ ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಿಸಿಪಿ ರೋಹಿಣಿ ಪಿಕೆ ಮಿಶ್ರಾ ತಿಳಿಸಿದ್ದಾರೆ.
ಸೆಕ್ಯುರಿಟಿ ಗಾರ್ಡ್ ಈಗಲೂ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಉಳಿದ ಇಬ್ಬರು ಬೌನ್ಸರ್ ಗಳು ಆಸ್ಪತ್ರೆಯ ಕೆಲಸದಿಂದ ವಜಾಗೊಳಿಸಿದ್ದರೂ ಆಸ್ಪತ್ರೆಗೆ ಬರುತ್ತಿದ್ದರು ಎಂದು ತಿಳಿದುಬಂದಿದೆ. ಘಟನೆ ನಡೆದ ಬಳಿಕ ಗಾರ್ಡ್ ನ್ನೂ ಕೆಲಸದಿಂದ ವಜಾಗೊಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


