ದೇಶ

ವಾಯುಪಡೆಗೆ ಬುಧವಾರ ಮತ್ತೆ ಮೂರು ರಫೇಲ್ ವಿಮಾನಗಳ ಸೇರ್ಪಡೆ

ವಾಯುಸೇನೆಗೆ ಬುಧವಾರ ಮೂರು ರಫೇಲ್ ವಿಮಾನ ಸೇರ್ಪಡೆಯಾಗಲಿವೆ. ಇದರ ಪರಿಣಾಮ ವಾಯುಪಡೆಗೆ ಮತ್ತಷ್ಟು ಬಲ ಬರಲಿದೆ.

ವಾಯುಪಡೆಗೆ ಬುಧವಾರ ಮತ್ತೆ ಮೂರು ರಫೇಲ್ ವಿಮಾನಗಳ ಸೇರ್ಪಡೆ
ರಫೇಲ್ ಯುದ್ಧ ವಿಮಾನ
Published On :

ನವದೆಹಲಿ: ವಾಯುಸೇನೆಗೆ ಬುಧವಾರ ಮೂರು ರಫೇಲ್ ವಿಮಾನ ಸೇರ್ಪಡೆಯಾಗಲಿವೆ.ಇದರ ಪರಿಣಾಮ ವಾಯುಪಡೆಗೆ ಮತ್ತಷ್ಟು ಬಲ ಬರಲಿದೆ. 

ಹೌದು. ಮುಂದಿನ ದಿನಗಳಲ್ಲಿ ಭಾರತೀಯ ವಾಯುಪಡೆಯ ಆಕ್ರಮಣಕಾರಿ ಶಸ್ತ್ರಾಗಾರವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಭಾರತೀಯ  ವಾಯುಪಡೆ ತನ್ನ ಬತ್ತಳಿಕೆಗೆ  ಬುಧವಾರ  ಇನ್ನೂ ಮೂರು ಹೊಸ ರಫೆಲ್ ಫೈಟರ್ ಜೆಟ್ ಗಳನ್ನು ಪಡೆಯಲಿದೆ.

ಐದು ರಫೇಲ್ ವಿಮಾನಗಳು ಜುಲೈ  28 ರಂದು ಭಾರತಕ್ಕೆ ಬಂದಿತ್ತು. ಈ ವಿಮಾನಗಳ ಸೇರ್ಪಡೆಯೊಂದಿಗೆ ಭಾರತೀಯ ವಾಯುಪಡೆಗೆ 8 ಯುದ್ಧ ವಿಮಾನಗಳು ಸೇರಿದಂತಾಗಲಿದೆ.

ಪ್ರಸ್ತುತ ಉಂಟಾಗಿರುವ ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ಕೆಲ ದಿನಗಳು ಇವುಗಳು ಕಾರ್ಯಾಚರಣೆ ಆರಂಭಿಸಲಿವೆ ಎಂದು ಹೇಳಲಾಗಿದೆ.ಮುಂದಿನ ದಿನಗಳಲ್ಲಿ ಮತ್ತಷ್ಟು ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸುವ ಸಾಧ್ಯತೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.