ಅಗ್ಗದ ದರದ ವೆಂಟಿಲೇಟರ್ ಗಳ ತಯಾರಿಕೆಗಾಗಿ ನಾಸಾದಿಂದ 3 ಭಾರತೀಯ ಕಂಪನಿಗಳ ಆಯ್ಕೆ
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾಗೆ 3 ಭಾರತೀಯ ಕಂಪನಿಗಳು ಕೋವಿಡ್-19 ಸೋಂಕಿತರಿಗಾಗಿ ಅಗ್ಗದ ದರದ ವೆಂಟಿಲೇಟರ್ ಗಳ ತಯಾರಿ ಮಾಡಿಕೊಡಲಿವೆ.

ವಾಷಿಂಗ್ ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾಗೆ 3 ಭಾರತೀಯ ಕಂಪನಿಗಳು ಕೋವಿಡ್-19 ಸೋಂಕಿತರಿಗಾಗಿ ಅಗ್ಗದ ದರದ ವೆಂಟಿಲೇಟರ್ ಗಳ ತಯಾರಿ ಮಾಡಿಕೊಡಲಿವೆ.
ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಪ್ರೈವೆಟ್ ಲಿಮಿಟೆಡ್, ಭಾರತ್ ಫೋರ್ಜ್ ಲಿಮಿಟೆಡ್, ಮೇಧಾ ಸರ್ವೋ ಡ್ರೈವ್ಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗಳನ್ನು ಅಗ್ಗದ ದರದಲ್ಲಿ ವೆಂಟಿಲೇಟರ್ ತಯಾರಿಕೆಗಾಗಿ ನಾಸಾ ಆಯ್ಕೆ ಮಾಡಿದೆ.
ತಯಾರಾಗಬೇಕಿರುವ ವೆಂಟಿಲೇಟರ್ ಗಳ ಮೂಲಮಾದರಿಯನ್ನು ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ ಎಂಜಿನಿಯರ್‌ಗಳು 37 ದಿನಗಳಲ್ಲಿ ತಯಾರಿಸಿದ್ದಾರೆ. ಇದಕ್ಕೆ ವೈಟಲ್ (Ventilator Intervention Technology Accessible Locally) ಎಂಬ ಹೆಸರು ನೀಡಲಾಗಿದ್ದು, ಈಗಾಗಲೇ ಸಪ್ಲೈ ಚೈನ್ ನಲ್ಲಿರುವ ಸಾಂಪ್ರದಾಯಿಕ ವೆಂಟಿಲೇಟರ್ ಗಳಿಗೆ ಬಳಕೆ ಮಾಡಬಹುದಾಗಿರುವ ಏಳನೇ ಒಂದರಷ್ಟು ಭಾಗಗಳನ್ನು ಬಳಕೆ ಮಾಡಿಕೊಂಡು ತಯಾರಿಸಲಾಗುತ್ತದೆ.
ಇದರಿಂದಾಗಿ ಸಾಂಪ್ರದಾಯಿಕ ವೆಂಟಿಲೇಟರ್ ಗಳನ್ನು ಅತ್ಯಂತ ತುರ್ತಾಗಿರುವ ಕೋವಿಡ್-19 ರೋಗಿಗಳಿಗೆ ಮಾತ್ರ ಬಳಕೆ ಮಾಡಲು ಅವಕಾಶ ಸಿಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


