ಲಡಾಕ್ ಬಿಕ್ಕಟ್ಟು: ಚೀನಾ ಗಡಿಯಲ್ಲಿ ಚಿನೂಕ್ ಹೆವಿ ಲಿಫ್ಟ್ ಕಾಪ್ಟರ್‌ಗಳನ್ನು ನಿಯೋಜಿಸಿದ ಭಾರತೀಯ ವಾಯುಪಡೆ
ಭಾರತ-ಚೀನಾ ನಡುವೆ ಲಡಾಕ್ ಬಿಕ್ಕಟ್ಟು ಉಂಟಾಗಿರುವ ಬೆನ್ನಲ್ಲೆ ಭಾರತದ ವಾಯು ಪಡೆ ಚೀನಾದೊಂದಿಗಿನ ಗಡಿ ಪ್ರದೇಶದಲ್ಲಿ ಅತ್ಯಾಧುನಿಕ ಸಿಹೆಚ್-47 ಚಿನೂಕ್ ಹೆವಿ ಲಿಫ್ಟ್ ಚಾಪರ್ ಗಳನ್ನು ನಿಯೋಜಿಸಿದೆ.

ಅರುಣಾಚಲ ಪ್ರದೇಶ: ಭಾರತ-ಚೀನಾ ನಡುವೆ ಲಡಾಕ್ ಬಿಕ್ಕಟ್ಟು ಉಂಟಾಗಿರುವ ಬೆನ್ನಲ್ಲೆ ಭಾರತದ ವಾಯು ಪಡೆ ಚೀನಾದೊಂದಿಗಿನ ಗಡಿ ಪ್ರದೇಶದಲ್ಲಿ ಅತ್ಯಾಧುನಿಕ ಸಿಹೆಚ್-47 ಚಿನೂಕ್ ಹೆವಿ ಲಿಫ್ಟ್ ಚಾಪರ್ ಗಳನ್ನು ನಿಯೋಜಿಸಿದೆ.
ಶಿಲ್ಲಾಂಗ್ ಬೇಸ್ ನ ರಕ್ಷಣಾ ವಕ್ತಾರ ವಿಂಗ್ ಕಮಾಂಡರ್ ರತ್ನಾಕರ್ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದು, ಸಿಹೆಚ್-47 ಚಿನೂಕ್ ಮಲ್ಟಿ ಮಿಷನ್ ಹೆಲಿಕಾಫ್ಟರ್ ಗಳು ಈಸ್ಟರ್ನ್ ಏರ್ ಕಮಾಂಡ್ ನಲ್ಲಿ ಕಾರ್ಯಾಚರಣೆಯಲ್ಲಿದ್ದು, ದೇಶದ ಸೇವೆಯಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಹೆಲಿಕಾಫ್ಟರ್ ಗಳು ಐಎಎಫ್ ಗೆ ಯುದ್ಧ ಮತ್ತು ಮಾನವೀಯ ಕಾರ್ಯಾಚರಣೆಗಳಲ್ಲಿ ಸಾಟಿಯಿಲ್ಲದ ಏರ್ಲಿಫ್ಟ್ ಸಾಮರ್ಥ್ಯವನ್ನು ಒದಗಿಸಲಿದೆ ಎಂದು ಹೇಳಿದ್ದಾರೆ.
ಈಗಿರುವ ಎಂಐ-17 ಗೆ ಹೋಲಿಕೆ ಮಾಡಿದರೆ ಈ ಚಿನೂಕ್ ಹೆಲಿಕಾಫ್ಟರ್ ಗಳು ಅತಿ ಎತ್ತರದ ಪ್ರದೇಶಗಳಲ್ಲಿ ಹಾರಾಟ ಮಾಡುವ ಸಾಮರ್ಥ್ಯಗಳನ್ನು ಹೊಂದಿದ್ದು ಎಂಐ-17 ಗಿಂತಲೂ ಹೆಚ್ಚಿನ ತೂಕ ಹೊತ್ತು ಸಾಗುವ ಸಾಮರ್ಥ್ಯವಿದೆ.
ಎಂಐ-17 24 ಪ್ರಯಾಣಿಕರು ಹಾಗೂ ಸಣ್ಣ ವಾಹನಗಳನ್ನು ಸೇರಿದಂತೆ 4,000 ಕೆಜಿ ಆಂತರಿಕ ಪೇಲೋಡ್ ಸಾಮರ್ಥ್ಯ ಹೊಂದಿದ್ದರೆ ಚಿನೂಕ್ ಹೆಲಿಕಾಫ್ಟರ್ ಗಳು 22,000lb (10,000 ಕೆ.ಜಿ)ಯಷ್ಟು ಸರಕು ಅಥವಾ ಸಂಪೂರ್ಣವಾಗಿ ಶಸ್ತ್ರಸಜ್ಜಿತಗೊಂಡಿರುವ 55 ಸೇನಾ ತುಕಡಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.
ಅರುಣಾಚಲ ಪ್ರದೇಶದ ಭಾಗದಲ್ಲಿ ಈ ಚಿನೂಕ್ ಹೆಲಿಕಾಫ್ಟರ್ ಗಳನ್ನು ನಿಯೋಜಿಸುತ್ತಿರುವುದು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಎಂದು ವಿಶ್ಲೇಷಿಸಲಾಗುತ್ತಿದೆ. ಇದೇ ಮಾದರಿಯ ಒಂದು ಹೆಲಿಕಾಫ್ಟರ್ ನ್ನು ಗುರುವಾರ ಅಗತ್ಯ ಸರಕುಗಳೊಂದಿಗೆ ಅರುಣಾಚಲ ಪ್ರದೇಶದ ಚಂಗ್ಲಾಂಗ್ ನ ವಿಜೋಯ್ ನಗರ್ ಸರ್ಕಲ್ ಗೆ ಕಳುಹಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


