ದೇಶ

ದೆಹಲಿ ಬಿಜೆಪಿ ಸಂಸದ ಗೌತಮ್ ಗಂಭೀರ್ ತಂದೆಯ ಎಸ್‌ಯುವಿ ಕಾರು ಕಳ್ಳತನ, ಅಪರಾಧಿಗಳ ಪತ್ತೆಗೆ ಕಾರ್ಯಾಚರಣೆ

ದೆಹಲಿ ಬಿಜೆಪಿ ಸಂಸದ ಮತ್ತು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರ ತಂದೆಯ ಎಸ್‌ಯುವಿ ಕಾರನ್ನು ದೆಹಲಿಯ ರಾಜಿಂದರ್ ನಗರ ಪ್ರದೇಶದ ಅವರ ನಿವಾಸದಿಂದ ಕಳವು ಮಾಡಲಾಗಿದೆ.

ದೆಹಲಿ ಬಿಜೆಪಿ ಸಂಸದ ಗೌತಮ್ ಗಂಭೀರ್ ತಂದೆಯ ಎಸ್‌ಯುವಿ ಕಾರು ಕಳ್ಳತನ, ಅಪರಾಧಿಗಳ ಪತ್ತೆಗೆ ಕಾರ್ಯಾಚರಣೆ
ಗೌತಮ್ ಗಂಭೀರ್
Published On :

ನವದೆಹಲಿ: ದೆಹಲಿ ಬಿಜೆಪಿ ಸಂಸದ ಮತ್ತು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರ ತಂದೆಯ ಎಸ್‌ಯುವಿ ಕಾರನ್ನು ದೆಹಲಿಯ ರಾಜಿಂದರ್ ನಗರ ಪ್ರದೇಶದ ಅವರ ನಿವಾಸದಿಂದ ಕಳವು ಮಾಡಲಾಗಿದೆ.

ಶುಕ್ರವಾರ ಮುಂಜಾನೆ ಈ ಘಟನೆ ನಡೆದಿದ್ದು  ದೀಪಕ್ ಗಂಭೀರ್ ಒಡೆತನದ ಬಿಳಿ ಬಣ್ಣದ ಟೊಯೋಟಾ ಫಾರ್ಚೂನ್ ಕಾರನ್ನು ಕಳ್ಳರು ಕಳವು ಮಾಡಿದ್ದಾರೆಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣವನ್ನು ಭೇದಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಲಾಗುತ್ತಿದೆ.

ಈ ಕುರಿತಂತೆ ಇದಾಗಲೇ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.

"ನಿನ್ನೆ ಮಧ್ಯಾಹ್ನ 3.30 ರ ಸುಮಾರಿಗೆ ಈ ಕಾರನ್ನು ಮನೆಯ ಮುಂದೆ ನಿಲ್ಲಿಸಲಾಗಿತ್ತು ಮತ್ತು ಅದೀಗ ಕಳ್ಳತನವಾಗಿದೆ. ಎಂದು ಕಂಡುಬಂದಿದೆ. ಅದರಂತೆ, ಎಫ್ಐಆರ್ ನೋಂದಾಯಿಸಲಾಗಿದ್ದು ನಾವೂ ಸಹ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತನಿಖೆ ಕೈಗೊಂಡಿದ್ದೇವೆ" ದೆಹಲಿ ಸೆಂಟ್ರಲ್ ಡಿಸಿಪಿ ಸಂಜಯ್ ಭಾಟಿಯಾ ಅವರು ದೂರವಾಣಿ ಮೂಲಕ  ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.